Site icon Suddi Belthangady

ಉಜಿರೆಯಲ್ಲಿ ಉಪಚುನಾವಣೆ: ಶೇ.58.17 ಮತದಾನ

ಉಜಿರೆ: ಉಜಿರೆ ಗ್ರಾಮ ಪಂಚಾಯತಿನ ಒಂದು ಸದಸ್ಯ ಸ್ಥಾನಕ್ಕೆ ಜುಲೈ 23ರಂದು ನಡೆದ ಉಪಚುನಾವಣೆಯಲ್ಲಿ ಬಿರುಸಿನ ಮತದಾನ ಬೆಳಿಗ್ಗೆ 7ಗಂಟೆಗೆ ಪ್ರಾರಂಭ ಗೊಂಡು ಸಂಜೆ 5ಗಂಟೆ ವರೆಗೆ ನಡೆಯಿತು.

ಒಟ್ಟು 1174ರಲ್ಲಿ 683 ಜನ ಮತ ಚಲಾಯಿಸಿದರು.

337ಜನ ಗಂಡಸರು, 346ಜನ ಹೆಂಗಸರು ಮತದಾನದಲ್ಲಿ ಭಾಗವಹಿಸಿ ಮತದಾನ ಮಾಡಿದರು.

ಬಿಜೆಪಿ ಬೆಂಬಲಿತ ಅಭ್ಯರ್ಥಿ ರಮೇಶ್ ಶೆಟ್ಟಿ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅನಿಲ್ ಪ್ರಕಾಶ್ ಡಿ’ಸೋಜಾ ನಡುವೆ ನೇರ ಸ್ಪರ್ಧೆ ನಡೆಯಿತು. ಅವಶ್ಯವಿದ್ದರೆ ಜುಲೈ 25ರಂದು ಮರು ಮತದಾನ ನಡೆಯಲಿದೆ.

ಜು.26ರಂದು ಬೆಳ್ತಂಗಡಿ ತಾಲೂಕು ಪಂಚಾಯತ್ ಕಚೇರಿಯಲ್ಲಿ ಮತ ಎಣಿಕೆ ನಡೆದು ಮಧ್ಯಾಹ್ನದೊಳಗೆ ಫಲಿತಾಂಶ ಘೋಷಣೆಯಾಗಲಿದೆ.

Exit mobile version