ನಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜು.22 ರಂದು ನಡ ಸರಕಾರಿ ಪ.ಪೂ ಕಾಲೇಜಿನಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮುಂಡಾಜೆಯ ಕಲಾಕುಂಜ ಆರ್ಟ್ಸ್ ನ ಸಂಯೋಜಕ ಜಯರಾಮ್ ರವರು, “ವಿದ್ಯಾರ್ಥಿಗಳು ಮಾದಕ ವಸ್ತುಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸಿ ಕೊಳ್ಳಬೇಕು ವಿದ್ಯಾರ್ಥಿಗಳು ಎಚ್ಚೆತ್ತರೆ ಸುದೃಢ ಸಮಾಜದ ನಿರ್ಮಾಣವಾಗುತ್ತದೆ ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಒಕ್ಕೂಟದ ಅಧ್ಯಕ್ಷ ಬಿ.ಎ ರಝಕ್ ವಹಿಸಿಕೊಂಡಿದ್ದರು.
ಸಂಸ್ಥೆಯ ಪ್ರಾಂಶುಪಾಲ ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಬೆಳ್ತಂಗಡಿ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ತನಿಯಪ್ಪ ಗೌಡ, ನಡ ಗ್ರಾಮದ ಸೇವಾಪ್ರತಿನಿಧಿ ಶಕುಂತಲ ಉಪಸ್ಥಿತರಿದ್ದರು.ಉಪನ್ಯಾಸಕರಾದ ಲಿಲ್ಲಿ ಪಿ.ವಿ ಮತ್ತು ವಸಂತಿ ಪಿ. ಯವರು ಕಾರ್ಯಕ್ರಮಕ್ಕೆ ಸಹಕರಿಸಿದರು.
ವಿದ್ಯಾರ್ಥಿನಿಯರಾದ ಸವಿತಾ, ಪ್ರಾಪ್ತಿ, ಯಕ್ಷಿತಾ ಪ್ರಾರ್ಥನೆಗೈದರು. ಶ್ರ
ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆಯ ಲಾಯಿಲ ವಿಭಾಗದ ಮೇಲ್ವಿಚಾರಕರು ವಂದಿಸಿದರು.ಉಪನ್ಯಾಸಕ ಮೋಹನ ಗೌಡ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.ವಲಯ ಮೇಲ್ವಿಚಾರಕಿ ಶಶಿಕಲಾ ವಂದಿಸಿದರು.