Site icon Suddi Belthangady

ಉಜಿರೆ: ತಾಲೂಕು ಮಟ್ಟದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ಯೋಜನೆ(ರಿ )ಬಿಸಿ ಟ್ರಸ್ಟ್ ಧರ್ಮಸ್ಥಳ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ )ಧರ್ಮಸ್ಥಳ, ಜಿಲ್ಲಾ ಜನಜಾಗೃತಿ ವೇದಿಕೆ ದ.ಕ ಜಿಲ್ಲೆ ಹಾಗೂ ಬೆಳ್ತಂಗಡಿ ತಾಲೂಕು ಜನಜಾಗೃತಿ ವೇದಿಕೆ, ಶ್ರೀ ಧರ್ಮಸ್ಥಳ ಮಂಜುನಾಥಶ್ವರ ಅನುದಾನಿತ ಸೆಕೆಂಡರಿ ಶಾಲೆ ಉಜಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ತಾಲೂಕು ಜನಜಗೃತಿ ವೇದಿಕೆ ಅಧ್ಯಕ್ಷರು, ಕಾಸಿಂ ಮಲ್ಲಿಗೆ ಮನೆ ಇವರು ದೀಪ ಬೆಳಗಿಸುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬೆಳ್ತಂಗಡಿ ಜನಜಗೃತಿ ವೇದಿಕೆಯ ಶಿಬಿರಧಿಕಾರಿ ರಾಜೇಶ್ ಸರ್ ರವರು ಮಕ್ಕಳಿಗೆ ದುಶ್ಚಟ ದುರಭ್ಯಾಸದಿಂದ ಬರುವ ಮಾರಕ ರೋಗಗಳಬಗ್ಗೆ ಮಾಹಿತಿ ಯನ್ನು ನೀಡುತ್ತಾ ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ದುಶ್ಚಟ ದುರಭ್ಯಾಸಗಳಿಗೆ ಬಲಿಯಾಗದೆ ತಂದೆ ತಾಯಿಗಳಿಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿ ಜೀವನವನ್ನು ರೂಪಿಸಿಕೊಳ್ಳಬೇಕು ಸಮಾಜದಲ್ಲಿ ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ನಿರ್ದೇಶಕರು ಮಕ್ಕಳಿಗೆ ಮಾದಕ ವಸ್ತು ಗಳಿಂದ ದೂರ ಇರುವಂತೆ ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಸತೆಯನ್ನು ವಹಿಸಿಕೊಂಡ ಉಜಿರೆ ಪಂಚಾಯತ್ ಅಧ್ಯಕ್ಷರಾದ ಪುಷ್ಪ ಆರ್ ಶೆಟ್ಟಿಯವರು ಮಾಹಿತಿ ನೀಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಿದ ಈ ಕಾರ್ಯಕ್ರಮವು ಮಕ್ಕಳಿಗೆ ತುಂಬಾ ಪ್ರಯೋಜನ ಆಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಶಾಲಾ ಮುಖ್ಯೋಪಾಧ್ಯಾಯ ಸುರೇಶ್, ತಾಲ್ಲೂಕು ಯೋಜನಾಧಿಕಾರಿ ಸುರೇಂದ್ರ ಸರ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಶಿಕ್ಷಕ ಜ್ಞಾನೇಶ ನಡೆಸಿ, ಶಾಲಾ ಶಿಕ್ಷಕರಾದ ವಿಶ್ವನಾಥ್ ರವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ, ಉಜಿರೆ ವಲಯ ಎಫ್.ಎಸ್ ವನಿತಾ ಕಾರ್ಯಕ್ರಮಕ್ಕೆ ಧನ್ಯವಾದವಿತ್ತರು.

Exit mobile version