Site icon Suddi Belthangady

ನಡ ಸರಕಾರಿ ಪ್ರೌಢ ಶಾಲೆಯಲ್ಲಿ ಗಣಿತ ಸಂಘದ ಉದ್ಘಾಟನೆ

ನಡ: ಸರಕಾರಿ ಪ್ರೌಢಶಾಲೆ ನಡೆ ಇಲ್ಲಿ 2013 – 24 ನೇ ಸಾಲಿನ ಗಣಿತ ಸಂಘದ ಉದ್ಘಾಟನೆಯನ್ನು ಜುಲಾಯಿ 22 ರಂದು ನಡೆಸಲಾಯಿತು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರೂ ಆಗಿರುವ ಮುಖ್ಯ ಶಿಕ್ಷಕ ಯಾಕೂಬ್ ಎಸ್ ಇವರು ಈ ದಿನ ಜು.22 ಪೈ ಬೆಲೆಯನ್ನು ಪ್ರತಿನಿಧಿಸುತ್ತದೆ.ಪೈ ಬೆಲೆ 22/ 7 ಆಗಿರುವುದರಿಂದ ಜುಲಾಯಿ 22 ರ ಈ ದಿನಕ್ಕೆ ಗಣಿತದಲ್ಲಿ ಮಹತ್ವವಿದೆ. ಆದ್ದರಿಂದ ಈ ದಿನ ಗಣಿತ ಸಂಘದ ಉದ್ಘಾಟನೆ ಮಾಡಿರುವುದು ಅರ್ಥಪೂರ್ಣವಾಗಿದೆ ಎಂದರು.


ನಡ ಸರಕಾರಿ ಪ್ರೌಢಶಾಲೆಯು ಈಗಾಗಲೇ ಗಣಿತಕ್ಕೆ ತನ್ನದೇ ಆದ ವಿಶಿಷ್ಠ ಕೊಡುಗೆ ನೀಡಿರುತ್ತದೆ. ಗಣಿತ ಪ್ರಯೋಗಾಲಯದ ಮೂಲಕ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಈ ಪ್ರೌಢಶಾಲೆಯು ವಿದ್ಯಾಥಿಗಳಿಗೆ ಅತೀ ಕ್ಲಿಷ್ಟವಾಗಿರುವ ಗಣಿತವನ್ನು ಸರಳಗೊಳಿಸಲು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ.
ಗಣಿತ ಸಂಘದ ಮೂಲಕ ಮಗ್ಗಿ ಕಂಠಪಾಠ, ಗಣಿತ ಸೂತ್ರ ಬರೆಯುವುದು, ಮಾದರಿ ತಯಾರಿಕೆ, ಗಣಿತಜ್ಞರ ಪರಿಚಯ, ಗಣಿತ ವಸ್ತು ಪ್ರದರ್ಶನ ಮುಂತಾದ ಕಾರ್ಯಕ್ರಮವನ್ನು ವರ್ಷಪೂರ್ತಿ ಹಮ್ಮಿಕೊಂಡಿದೆ.
ಇಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ಗಣಿತಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು.

ಗಣಿತ ಸಂಘದ ಅಧ್ಯಕ್ಷೆ ಕುಮಾರಿ ಸಾನ್ವಿ ಹಾಗೂ ಕಾರ್ಯದರ್ಶಿ ಕುಮಾರಿ ರಝ್ಮಿ ನಾ ಫಾತಿಮಾ ಗಣಿತ ಸಂಘದ ಚಟುವಟಿಕೆಗಳನ್ನು ರೂಪಿಸಿದ್ದು, ಇಂದಿನ ಕಾಯ೯ಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.

Exit mobile version