Site icon Suddi Belthangady

ಉಜಿರೆ: ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳ ಪದಪ್ರದಾನ ಕಾರ್ಯಕ್ರಮ

ಉಜಿರೆ: ತರಗತಿ ನಾಯಕನಾದವನು ನಾಯಕತ್ವದಲ್ಲಿ ತನ್ನನ್ನು ತಾನು ಶಿಸ್ತಿನಿಂದ ತೊಡಗಿಸಿಕೊಂಡು ಸಹಪಾಠಿಗಳಿಗೆ ಮಾದರಿಯಾಗಿರಬೇಕು.ದೇಶದ ಭವಿಷ್ಯ ತರಗತಿಯಿಂದಲೇ ಆರಂಭ ಎಂದು ಇನ್ನೊವೇಟಿವ್ ಲರ್ನಿಂಗ್ ಫೌಂಡೇಶನ್ (ರಿ) ಮೂಡಬಿದ್ರೆ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಹೇಳಿದರು.ಜು.21ರಂದು ಉಜಿರೆಯ ಶ್ರೀ ಧ.ಮಂ.ಪ.ಪೂ ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿಗಳ ಪದಪ್ರದಾನ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.

ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.ಇದೇ ಸಂದರ್ಭದಲ್ಲಿ ಹರೀಶ್ ಎಂ.ವೈ ಕಾರ್ಯನಿರ್ವಹಣಾಧಿಕಾರಿ ಶ್ರೀ ಧ.ಮಂ.ಶಿಕ್ಷಣ ಸಂಸ್ಥೆ (ರಿ) ಉಜಿರೆ ಸ್ವಚ್ಛತಾ ಸೇನಾನಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಲ್ಲಾ ವಿದ್ಯಾರ್ಥಿ ನಾಯಕರಿಗೆ ಗುರುತು ಪತ್ರ ನೀಡಿ ಗೌರವಿಸಲಾಯಿತು.ಉಪಪ್ರಾಂಶುಪಾಲ ಡಾ.ರಾಜೆಶ್ ಬಿ ಉಪಸ್ಥಿತರಿದ್ದರು.ಶ್ರೇಯಾ ವೈ ಸ್ವಾಗತಿಸಿ, ಸಿಂಚನಾ ಕೆ ಗೌಡ ಅತಿಥಿಗಳನ್ನು ಪರಿಚಯಿಸಿದರು, ಅದಿತಿ ಕಾರ್ಯಕ್ರಮ ನಿರೂಪಿಸಿ, ತನುಷಾ ಕೆ.ಟಿ. ವಂದಿಸಿದರು.

ರತ್ನವರ್ಮ ಹೆಗ್ಗಡೆಯವರಿಂದ 1966 ರಲ್ಲಿ ಸ್ಥಾಪಿಸಲ್ಪಟ್ಟಿರುವ ಶ್ರೀ ಧ.ಮಂ.ಪ.ಪೂ ಕಾಲೇಜು, ಪದ್ಮಭೂಷಣ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ದೂರಗಾಮಿ ಚಿಂತನೆಗಳೊಂದಿಗೆ ನಾಡಿನ ಶ್ರೇಷ್ಠ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿ ರೂಪುಗೊಂಡು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣದೊಂದಿಗೆ ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಅವಕಾಶಗಳನ್ನು ಒದಗಿಸಿಕೊಡುತ್ತಿದೆ.

2023ನೇ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಲೇಜು ಶೇಕಡಾ 99.55 ಫಲಿತಾಂಶವನ್ನು ದಾಖಲಿಸಿದೆ. ಕಾಲೇಜಿನ ವಿಜ್ಞಾನ ವಿಭಾಗದಲ್ಲಿ 479 ವಿದ್ಯಾರ್ಥಿಗಳಲ್ಲಿ 478ವಿದ್ಯಾರ್ಥಿಗಳು ತೇರ್ಗಡೆಯಾಗಿ 99.79% ಫಲಿತಾಂಶ ಬಂದಿದೆ, 228 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 244 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿದ್ದಾರೆ.ವಾಣಿಜ್ಯ ವಿಭಾಗದಲ್ಲಿ 347 ವಿದ್ಯಾರ್ಥಿಗಳಲ್ಲಿ 346 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇಕಡಾ 99.71 ಫಲಿತಾಂಶ ಬಂದಿದೆ.135 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 203 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ಕಲಾ ವಿಭಾಗದಲ್ಲಿ 78 ವಿದ್ಯಾರ್ಥಿಗಳಲ್ಲಿ 76 ವಿದ್ಯಾರ್ಥಿಗಳೂ ಉತ್ತೀರ್ಣರಾಗಿ 97.44% ಫಲಿತಾಂಶ ಪಡೆದಿದೆ.10 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 48 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿರುತ್ತಾರೆ.ವಿಜ್ಞಾನ ವಿಭಾಗದಲ್ಲಿ ನಿತಿನ್ ಎಂ (588) ರಾಜ್ಯದಲ್ಲಿ 8ನೇ ಸ್ಥಾನ ಪಡೆದಿದ್ದಾರೆ.ಸುಶ್ಮಿತಾ ವಿ (583), ನವೀನ್ ಭಟ್ (582), ರಜತ್ ರಾಮಕೃಷ್ಣ (582) ಕಾಲೇಜಿನಲ್ಲಿ ಹೆಚ್ಚಿನ ಅಂಕ ಗಳಿಸಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಸ್ಪಂದನಾ (594) ಮತ್ತು ಸ್ಪರ್ಶ (594) ರಾಜ್ಯದಲ್ಲಿ 4ನೇ ಸ್ಥಾನವನ್ನು, ಪ್ರಣ್ವಿತ್ (593) ರಾಜ್ಯದಲ್ಲಿ 5ನೇ ಸ್ಥಾನ, ಮಾನ್ಯ ಹೆಚ್.ಎಂ. (592) ಮತ್ತು ಧರಿತ್ರಿ ಭಿಡೆ (592) ರಾಜ್ಯದಲ್ಲಿ 6ನೇ ಸ್ಥಾನ, ಪ್ರಣಮ್ಯ ಡಿ ಜೈನ್ (590) ರಾಜ್ಯದಲ್ಲಿ 8ನೇ ಸ್ಥಾನ, ಧಾರಿಣಿ (588) ರಾಜ್ಯದಲ್ಲಿ 10ನೇ ಸ್ಥಾನವನ್ನು ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಸನ್ನಿಧಿ ಕೆ.ಎಸ್ (559), ಸುಮೇಧಾ ಭಟ್ ಕೆ (556), ಯಶಸ್ ಎಂ (553) ಕಾಲೇಜಿಗೆ ಅತೀ ಹೆಚ್ಚಿನ ಅಂಕ ಗಳಿಸಿದ್ದಾರೆ.

ವಿಜ್ಞಾನ ವಿಭಾಗದ ಪಿ.ಸಿ.ಎಂ.ಬಿ., ಪಿ.ಸಿ.ಎಂ.ಎಸ್., ಪಿ.ಸಿ.ಎಂ.ಸಿ., ವಾಣಿಜ್ಯ ವಿಭಾಗದ ಬಿ.ಎ.ಇ.ಎಸ್, ಬಿ.ಎ.ಇ.ಸಿ, ಕಲಾ ವಿಭಾಗದ ಹೆಚ್.ಇ.ಪಿ.ಕೆ ವಿಷಯಗಳಲ್ಲಿ ಶೇಕಡಾ 100 ಫಲಿತಾಂಶ ದಾಖಲಾಗಿದೆ.ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಎಸ್ ಸತೀಶ್ಚಂದ್ರ ಕಾಲೇಜಿನ ಸಾಧನೆಗೆ ಕಾರಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಎಲ್ಲಾ ಉಪನ್ಯಾಸಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

Exit mobile version