Site icon Suddi Belthangady

ಮದ್ದಡ್ಕ: ನೂರುಲ್ ಹುದಾ ಜುಮಾ ಮಸೀದಿಯ ನೂತನ ಕಚೇರಿ ಉದ್ಘಾಟನೆ

ಮದ್ದಡ್ಕ: ನೂರುಲ್ ಹುದಾ ಜುಮಾ ಮಸೀದಿಯ ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮವನ್ನು ಶುಕ್ರವಾರದಂದು ಮಸೀದಿಯ ಖತೀಬರಾದ ಹಸನ್ ಮುಬಾರಕ್ ಸಖಾಫಿ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ ಅಶ್ರಫ್ ಚಿಲಿಂಬಿ ವಹಿಸಿದರು. ಸಮಾರಂಭದಲ್ಲಿ ಹಿರಿಯ ವಿದ್ವಾಂಸರಾದ ಯಾಕೂಬ್ ಮುಸ್ಲಿಯಾರ್, ಸಲೀಮ್ ತಂಘಳ್, ಮುಹಮ್ಮದ್ ಬಶೀರ್ ಲತೀಫಿ, ಕೋಶಾಧಿಕಾರಿಯಾದ ರಿಯಾಝ್ ಸಬರಬೈಲ್, ಉಪಾಧ್ಯಕ್ಷರಾದ ಸಾಲಿಹ್ ಆಲಂದಿಲ, ಮತ್ತು ಹೈದರ್ ಕಾಂಟ್ರಾಕ್ಟರ್, ಜೊತೆ ಕಾರ್ಯದರ್ಶಿಗಳಾದ ಸಾಧಿಕ್ ದರ್ಖಾಸ್, NS ಉಮರ್ ಮಾಸ್ಟರ್, ಲೆಕ್ಕ ಪರಿಶೋಧಕರಾದ PM ಅಹ್ಮದ್ ಇಬ್ರಾಹಿಂ ಮತ್ತು ಕಮೀಟಿ ಸದಸ್ಯರು, ಜಮಾಹತ್ ನ ಹಿರಿಯರು ಭಾಗವಹಿಸಿದರು.

ಪ್ರದಾನ ಕಾರ್ಯದರ್ಶಿ ಎಂ ಸಿರಾಜ್ ಚಿಲಿಂಬಿ ಸ್ವಾಗತಿಸಿ ವಂದಿಸಿದರು.

Exit mobile version