ಉಜಿರೆ: ಅನುಗ್ರಹ ಕಾಲೇಜಿನಲ್ಲಿ ಮಾದಕ ವ್ಯಸನ ಮುಕ್ತ ಅಭಿಯಾನದ ಕಾರ್ಯಾಗಾರವು ಜು.20ರಂದು ಅನುಗ್ರಹ ಅಡಿಟೋರಿಯಂನಲ್ಲಿ ಜರಗಿತು.ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಧ.ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ‘ರಿ’ ಉಜಿರೆ ಇಲ್ಲಿಯ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಬಿ. ಸೋಮಶೇಖರ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಶಿಕ್ಷಣ ಅಂದರೆ, ಸಂಸ್ಕಾರ ಆಚಾರ ವಿಚಾರ ನಡೆ ನುಡಿಯ ಮೂಲಕ ಗೊತ್ತಾಗಬೇಕು. ಜೀವನದಲ್ಲಿ ಕೂಡಿಸು ಮತ್ತು ಕಳೆ, ಒಳ್ಳೆಯದನ್ನು ಕೂಡಿಸುವುದು ಕೆಟ್ಟದ್ದನ್ನು ಕಳೆಯುವುದು ಹಾಗೆಯೇ ಯಾರ ಜೊತೆ ಇದ್ದರೂ ನೀವೂ ನೀವಾಗಿರಿ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪದ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ವಂ.ಫಾ. ವಿಜಯ್ ಲೋಬೋ ಮಾತನಾಡುತ್ತಾ ದುಶ್ಚಟ ನಿಯಂತ್ರಣದಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯ ಮಾದಕ ವಸ್ತುಗಳಿಂದ ಮುಕ್ತವಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.ಉಪನ್ಯಾಸಕ ಆರುಣ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.