Site icon Suddi Belthangady

ಅಲ್ಪಸಂಖ್ಯಾತ ನಾಯಕನಿಗೆ ಚುನಾವಣೆಯ ಸೋಲು ಗೆಲುವಿನ ಪರಾಮರ್ಶೆ ಸಭೆಯಲ್ಲಿ ಅವಮಾನ: ಸಲೀಂ

ಬೆಳ್ತಂಗಡಿ: ಜು.14ರಂದು ವಿಧಾನಸಭೆ ಚುನಾವಣೆಯ ಸೋಲು ಗೆಲುವಿನ ಪರಾಮರ್ಶೆ ನಡೆಸಲು ಕೆಪಿಸಿಸಿ ಸೂಚನೆ ಮೇರೆಗೆ ಸಮಿತಿ ರಚಿಸಿ ರಾಜ್ಯಸಭೆಯ ಮಾಜಿ ಸದಸ್ಯ ಬಿ.ಇಬ್ರಾಹಿಂ ಅವರ ನೇತೃತ್ವದಲ್ಲಿ ಪೂತ್ತೂರಿನ ಮಾಜಿ ಶಾಸಕಿ ಶಕುಂತಲ ಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷೆ ಮಮತಾಗಟ್ಟಿ ಹಾಗೂ ಕಾಂಗ್ರೆಸ್ ಮುಖಂಡರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಬಿ.ಇಬ್ರಾಹಿಂ ಅವರನ್ನು ಮಾತನಾಡಲು ಬಿಡದೆ, ಶಿಸ್ತು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಅಲ್ಪಸಂಖ್ಯಾತ ನಾಯಕನಿಗೆ ಅಗೌರ ಮಾಡಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ನಗರ ಘಟಕದ ಅಧ್ಯಕ್ಷ ಸಲೀಂ ಹೇಳಿದ್ದಾರೆ.

ಅವರು ಜು.21ರಂದು ಬೆಳ್ತಂಗಡಿ ಸಕಾರಿ ನೌಕರರ ಸಂಘದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ನಿಂತ ಪೋಟೋವನ್ನು ತೋರಿಸಿಕೊಂಡು ಸಭೆಗೆ ಬಂದ ರಾಜೇಶ್ ಭಟ್ ಸವನಾಲು, ಸಚಿನ್ ನೂಜೋಡಿ, ಪ್ರವೀಣ್ ಫರ್ನಾಂಡೀಸ್ ಉಜಿರೆ ಅವರು ಇಬ್ರಾಹಿಂ ಅವರನ್ನು ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಸಭೆಯಿಂದ ಹೊರಗೆ ಕಳುಹಿಸಿ ಎಂದು ಅಗೌರವ ತೋರಿದ್ದಾರೆ.ಇವರ ವಿರುದ್ಧ ಪಕ್ಷದ ಶಿಸ್ತು ಕ್ರಮ ಕೈಗೊಳ್ಳುವಂತೆ ಪಕ್ಷದ ವರಿಷ್ಠರಿಗೆ ತಿಳಿಸಲಾಗಿದೆ ಎಂದು ಸಲೀಂ ತಿಳಿಸಿದ್ದಾರೆ.

ಗ್ರಾಮೀಣ ಅಲ್ಪಸಂಖ್ಯಾತರ ಅಧ್ಯಕ್ಷ ಆಶ್ರಫ್ ನೆರಿಯ, ಜಿಲ್ಲಾ ಅಲ್ಪಸಂಖ್ಯಾತರ ಉಪಾಧ್ಯಕ್ಷ ಕೆ.ಹೆಚ್.ಖಲೀದ್, ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಪಡಪ್ಪು, ಪಂಚಾಯತ್ ರಾಜ್ ಸಂಘಟನೆ ನಗರ ಅಧ್ಯಕ್ಷ ಪ್ರಶಾಂತ್ ವೇಗಸ್, ಕಾಂಗ್ರೆಸ್ ಮುಖಂಡ ನಝೀರ್ ಉಪಸ್ಥಿತರಿದ್ದರು.

Exit mobile version