Site icon Suddi Belthangady

ಬೆಳ್ತಂಗಡಿ ಸಂಜಯ್ ಗ್ಲೋಬಲ್ ಫೌಂಡೇಶನ್ ಇದರ ನೂತನ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ: ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ಇದರ ವಾರ್ಷಿಕ ಸಭೆಯು ಜು.18 ರಂದು ಬೆಳ್ತಂಗಡಿ ಜಮೀಯತುಲ್ ಫಲಾಹ್ ಸಭಾಭವನದಲ್ಲಿ ನಡೆಯಿತು.

ಸಂಘಟನೆಯ ಅಧ್ಯಕ್ಷ ಇಸ್ಮಾಯಿಲ್ IB ಅಧ್ಯಕ್ಷತೆ ವಹಿಸಿದ್ದರು.2022-23ನೇ ಸಾಲಿನ ವರದಿಯನ್ನು ಪ್ರಧಾನ ಕಾರ್ಯದರ್ಶಿ ಹನೀಫ್ ವರ್ಷ ಮಂಡಿಸಿದರು.

ನೂತನ ಅಧ್ಯಕ್ಷರಾಗಿ ಇಸ್ಮಾಯಿಲ್ IB, ಪ್ರಧಾನ  ಕಾರ್ಯದರ್ಶಿಯಾಗಿ ಹನೀಫ್ ವರ್ಷಾ,  ಉಪಾಧ್ಯಕ್ಷರಾಗಿ ರಿಜ್ವಾನ್ BK ,ಜೊತೆಕಾರ್ಯದರ್ಶಿಯಾಗಿ ಮೊಹಮ್ಮದ್ ಕುದ್ರಡ್ಕ , ಕೋಶಾಧಿಕಾರಿಯಾಗಿ ಶಫೀರ್ ಸಂಜಯ ನಗರ, ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಅಕ್ಬರ್ ಬೆಳ್ತಂಗಡಿ, ರಶೀದ್ ಸಂಜಯನಗರ, ಗಲ್ಫ್ ಪ್ರತಿನಿಧಿಗಳಾಗಿ ಅಬ್ಬಾಸ್ ಸೌದಿ ಅರೇಬಿಯಾ, ಶರೀಫ್ ಸೌದಿ ಅರೇಬಿಯಾ,ಇರ್ಫಾನ್ ಹಂಝ ಸೌದಿ ಅರೇಬಿಯಾ, ನಝೀರ್ ಅಬುದಾಬಿ, ತೌಫೀಕ್ ಕತಾರ್, ಇವರನ್ನು ಸರ್ವಾನುಮತದಿಂದ ಆರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷರಾದ ನಝೀರ್ ಬಿ.ಎ, ಕಾಂಗ್ರೆಸ್ ಪಕ್ಷದ ಮುಖಂಡರಾದ ಮೆಹಬೂಬ್ ಸಂಜಯನಗರ, ಹಾಗೂ ಸಂಜಯ್ ಗ್ಲೋಬಲ್ ಫೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು.

Exit mobile version