Site icon Suddi Belthangady

ಕಳೆಂಜ: ಮಳೆ ನೀರಿನಿಂದ ಹರಡುವ ರೋಗಗಳ ಬಗ್ಗೆ ಮಾಹಿತಿ

ಕಳೆಂಜ: ದಕ್ಷಿಣ ಕನ್ನಡ ರೂರಲ್ ಡೆವಲಪ್ಮೆಂಟ್ ಸೊಸೈಟಿ (ರಿ) ಬೆಳ್ತಂಗಡಿ (ಡಿ.ಕೆ.ಆರ್.ಡಿ.ಎಸ್) ಮಹಿಳಾ ಸಬಲೀಕರಣ ಯೋಜನೆಯ ಅಂಗವಾಗಿ ಕಳೆಂಜದ ಸರ್ವಶ್ರೀ ಮಹಾ ಸಂಘದ ಸದಸ್ಯರಿಗೆ ಮಳೆ ನೀರಿನಿಂದ ಹರಡುವ ವಿವಿಧ ಖಾಯಿಲೆಗಳ ಬಗ್ಗೆ ಮಾಹಿತಿ ಕಾರ್ಯಗಾರವು ಜುಲೈ 18 ರಂದು ಕಾಯರ್ತಡ್ಕ ಸೈಂಟ್ ಸೆಬಾಸ್ಟಿಯನ್ ಚರ್ಚ್ ಸಭಾಭವನದಲ್ಲಿ ನಡೆಯಿತು.

ಕಾಯರ್ತಡ್ಕ ವಲಯದ ಆಶಾ ಕಾರ್ಯಕರ್ತೆಯಾದ ದೇವಕಿರವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಡೆಂಗ್ಯೂ ಜ್ವರ, ಮಲೇರಿಯಾ, ಇಲಿ ಜ್ವರ, ಚಿಕುನ್ ಗುನ್ಯಾ ಮುಂತಾದ ರೋಗಗಳ ಬಗ್ಗೆ ಮಾಹಿತಿ ನೀಡಿದರು.

ಸರ್ವಶ್ರೀ ಮಹಾ ಸಂಘದ ಸದಸ್ಯೆ ತ್ರೇಸಿಯಾರವರು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು.

ಸೌಭಾಗ್ಯ ಸಂಘದ ಸದಸ್ಯೆ ಸಿಲ್ವಿ ಎ.ಟಿ ಸ್ವಾಗತಿಸಿ, ಸ್ನೇಹ ಸಂಘದ ಸದಸ್ಯೆ ಶಾಲಿರವರು ಧನ್ಯವಾದವಿತ್ತರು.

ಕಾರ್ಯಕರ್ತರಾದ ಮಾರ್ಕ್ ಡಿ ಸೋಜಾರವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.ಒಟ್ಟು 25 ಮಂದಿ ಉಪಸ್ಥಿತರಿದ್ದರು.

Exit mobile version