ಸೋಣಂದೂರು: ಮುಹಿಯ್ಯದ್ದೀನ್ ಜುಮ್ಮಾ ಮಸೀದಿ ಪಣಕಜೆ ಇದರ ಮಹಾಸಭೆ ಖತೀಬರಾದ ಅಪ್ಸರ್ ಫೈಝಿ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಕಾರ್ಯದರ್ಶಿ ಮಹಮ್ಮದ್ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು.ಸಿದ್ದೀಕ್ ಮುಸ್ಲಿಯಾರ್ ದುವಾ ಗೈದರು.
ಈ ಸಂದರ್ಭದಲ್ಲಿ 2023- 26 ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಡಾ! ನಿಯಾಝ್ ಪಣಕಜೆ, ಉಪಾಧ್ಯಕ್ಷರಾಗಿ ಪಿ.ಎ ಯೂಸುಫ್, ಪ್ರಧಾನ ಕಾರ್ಯದರ್ಶಿ ಬಿ.ಎಂ ಅಶ್ರಫ್ (ಕೆ.ಎಸ್.ಆರ್.ಟಿ.ಸಿ), ಕಾರ್ಯದರ್ಶಿ ನಿಯಾಝ್ ಸಬರಬೈಲು, ಕೋಶಾದಿಕಾರಿ ಮುನೀರ್ ಅಹ್ಮದ್, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು.