ಬೆಳ್ತಂಗಡಿ: ಬೆಳ್ತಂಗಡಿ: ಜು.19ರಂದು ಮಿನಿ ವಿಧಾನಸೌಧದ ಎದುರು ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರು ಮತ್ತು ಜೈನ ಮುನಿಗಳ ಹತ್ಯೆ ಖಂಡಿಸಿ ಹಿಂದೂ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಯಿತು.
ಹಿಂದೂ ಜಾನ ಜಾಗೃತಿ ಸಮಿತಿಯ ಚಂದ್ರ ಶೇಖರ ಇಂದಬೆಟ್ಟು ಮಾತನಾಡಿ ಹಿಂದೂಗಳಿಗೆ ರಕ್ಷಣೆಗೆ ಸಿಗುತ್ತಿಲ್ಲ ಅನೇಕ ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆದಿದೆ ಆದರೆ ಇಲ್ಲಿಯವರೆಗೆ ಎಷ್ಟು ನ್ಯಾಯ ಸಿಕ್ಕಿದೆ.ಓಲೈಕೆಯ ರಾಜಕಾರಣದಿಂದ ಸಮಾನತೆ ಇಂದು ಅಡಗಿ ಹೋಗಿದ್ದು.ಸಮಾನ ನಾಗರೀಕತೆ ಕಾನೂನು ತರಲು ನಾವೆಲ್ಲಾ ಒಗ್ಗೂಡಬೇಕು, ಪ್ರತ್ಯೇಕವಾಗಿ ಜಾತಿ ಧರ್ಮ ಮತಗಳಿಗೆ ಕಾನೂನು ತರದೆ ಎಲ್ಲರಿಗೂ ಸಮಾನತೆಯ ಕಾನೂನು ತರಬೇಕು ಎಂದರು.
ಹಿಂದೂ ಜನಜಾಗೃತಿ ಸಮಿತಿಯ ದಾಮೋದರ್ ಮಾತಾನಾಡಿ ಸರಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಆಗುವಷ್ಟರಲ್ಲಿ ಎಷ್ಟು ಹತ್ಯೆಗಳು ನಡೆಯಿತು ಯಾಕೆ ಈ ಹತ್ಯೆಗೆ ನ್ಯಾಯ ಸಿಕ್ಕಿಲ್ಲ. ಚಿಕ್ಕೋಡಿಯಲ್ಲಿ ನಡೆದ ಜೈನ ಮುನಿಗಳ ಹತ್ಯೆಗೈದು ಆರೋಪಿಗಳನ್ನು ಬಂಧಿಸಿ.ಅಲ್ಪಸಂಖ್ಯಾತರ ಓಲೈಕೆ ಮಾಡದೇ ಎಲ್ಲರನ್ನೂ ಸಮಾನರನ್ನಾಗಿ ಕಾಣಿ ಎಂದರು.
ಹಿಂದೂ ಜಾನ ಜಾಗೃತಿ ವೇದಿಕೆಯ ಉಪೇಂದ್ರ ಮಾತನಾಡಿ ಹಿಂದೂ ಕಾರ್ಯಕರ್ತರ ಮೇಲೆ ನಡೆದ ಹತ್ಯೆಗೆ ಯಾರು ಹೊಣೆ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೆ ಹಿಂದೂ ಕಾರ್ಯಕರ್ತರ ಮೇಲೆ ಹತ್ಯೆಗಳು ಶೋಷಣೆಗಳು ನಡೆಯುತ್ತಲೆ ಇವೆ ಎಂದರು.ಶಶಿಧರ್ ಅವರು ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ತಶಿಹೀಲ್ದಾರ್ ಸುರೇಶ್ ಆವರಿಗೆ ಮನವಿಯನ್ನು ಸಲ್ಲಿಸಲಾಯಿತು.