Site icon Suddi Belthangady

ಸಿಪಿಐ(ಎಂ) ಬೆಳ್ತಂಗಡಿ ನೂತನ ಸಂಘಟನಾ ಸಮಿತಿ ಅಸ್ತಿತ್ವಕ್ಕೆ- ಪಕ್ಷದ ಪಿ.ಬಿ.ಸದಸ್ಯ ಕಾ.ಎಂ.ಎ.ಬೇಬಿ ಘೋಷಣೆ

ಬೆಳ್ತಂಗಡಿ: ಕೆಲವು ವರ್ಷಗಳಿಂದ ಗೊಂದಲದ ಗೂಡಾಗಿ ಪಕ್ಷದ ಬೆಳವಣಿಗೆ ತಡೆಯಾದ ಹಿನ್ನೆಲೆಯಲ್ಲಿ ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಸ್ಯೆಗೆ ಕೊನೆಗೂ ಪಕ್ಷದ ಕೇಂದ್ರ ಸಮಿತಿ ಅಂತಿಮ ತೆರೆ ಎಳೆದು ಹಳೆಯ ಸಮಿತಿಯನ್ನು ವಿಸರ್ಜಿಸಿ ನೂತನ ನಾಯಕತ್ವದ ತಾಲೂಕು ಸಂಘಟನಾ ಸಮಿತಿ ರಚಿಸಿದೆ ಎಂದು ಸಿಪಿಐ(ಎಂ) ಪಕ್ಷದ ಕೇಂದ್ರ ಸಮಿತಿಯ ಪೊಲಿಟ್‌ ಬ್ಯೂರೋ ಸದಸ್ಯರೂ, ಕರ್ನಾಟಕದ ಪಕ್ಷದ ಉಸ್ತುವಾರಿಗಳೂ ಆಗಿರುವ ಕಾ.ಎಂ.ಎ.ಬೇಬಿ ಹೇಳಿದರು.


ಅವರು ಜು.19 ರಂದು ಬೆಳ್ತಂಗಡಿ ಅಂಬೇಡ್ಕರ್‌ ಭವನದಲ್ಲಿ ನಡೆದ ಪಕ್ಷದ ಸರ್ವ ಸದಸ್ಯರನ್ನುದ್ದೇಶಿಸಿ ಮಾತಾಡಿದರು.ಬೆಳ್ತಂಗಡಿ ಸಂಘಟನಾ ಸಮಿತಿಗೆ ನಾಯಕರುಗಳಾಗಿ ಬಿ.ಎಂ.ಭಟ್‌, ಲಕ್ಷ್ಮಣ ಗೌಡ, ಜಯರಾಮ ಮಯ್ಯ, ಶ್ಯಾಮರಾಜ್‌, ಈಶ್ವರಿ, ಧನಂಜಯ ಅವರುಗಳನ್ನು ಪಕ್ಷದ ಕೇಂದ್ರ ಸಮಿತಿಯು ಆಯ್ಕೆ ಮಾಡಿದೆ ಎಂದರು.ತಾಲೂಕು ಸಂಘಟನಾ ಸಮಿತಿ ಕಾರ್ಯದರ್ಶಿಯಾಗಿ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿರುವ ಕಾ. ಮುನೀರ್‌ ಕಾಟಿಪಳ್ಳ ಅವರನ್ನು ಜಿಲ್ಲಾ ಸಮಿತಿ ನೇಮಕ ಮಾಡಿದೆ ಎಂದೂ ಅವರು ತಿಳಿಸಿದರು.ಪಕ್ಷದ ಶಿಸ್ತಿನ ಸಿಪಾಯಿಗಳಾಗಿ ಪಕ್ಷದ ಬೇಳವಣಿಗೆಗೆ ಬದ್ದತೆಯಿಂದ ದುಡಿಯಲು ಕರೆ ನೀಡಿದರು. ಸದ್ಯದಲ್ಲೇ ಬರುವ ಜಿಲ್ಲಾಪಂಚಾಯತು/ತಾಲೂಕು ಪಂಚಾಯತು ಚುನಾವಣೆಯಲ್ಲಿ ಸ್ಪರ್ದಿಸಿ ಗೆಲುವು ಸಾಧಿಸಬೇಕು ಎಂದರು.


ದ.ಕ ಜಿಲ್ಲಾ ಪಕ್ಷದ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ.ಕೃಷ್ಣಪ್ಪ ಕೊಂಚಾಡಿ ಕೇಂದ್ರ ಸಮಿತಿ ತೀರ್ಮಾನದ ವರದಿ ಮಂಡಿಸಿದರು. ಸಭೆಯ ಅದ್ಯಕ್ಷತೆಯನ್ನು ಕೆ.ಯಾಧವ ಶೆಟ್ಟಿ ವಹಿಸಿ ಪ್ರಾಸ್ತಾವಿಕವಾಗಿ ಮಾತಾಡಿ ಬೆಳ್ತಂಗಡಿಯಲ್ಲಿ ಜಿಲ್ಲಾ ಪಂಚಾಯತು ಮತ್ತು ತಾಲೂಕು ಪಂಚಾಯತು ಚುನಾವಣೆಯಲ್ಲಿ ಸ್ಪರ್ದಿಸಲು ಸರ್ವ ಸದಸ್ಯರ ಸಭೆಯು ತೀರ್ಮಾನಿಸಿದೆ ಎಂದರು.

ಸಿಪಿಐ(ಎಂ) ದ.ಕ. ಕಾರ್ಯದರ್ಶಿ ಮಂಡಳಿ ಸದಸ್ಯ ಸುಕುಮಾರ್‌ ಮತ್ತು ತಾಲೂಕು ಕಾರ್ಯದರ್ಶಿ ಆಗಿಯೂ ಆಯ್ಕೆಯಾದ ಮುನೀರ್‌ ಕಾಟಿಪಳ್ಳ ಉಪಸ್ಥಿತರಿದ್ದರು.

ಈಶ್ವರಿ ಮತ್ತು ಜಯಶ್ರೀ ಅವರ ಕ್ರಾಂತಿಗೀತೆ ಹಾಡಿದರು.ತಾಲೂಕು ಸಂಘಟನಾ ಸಮಿತಿ ಸದಸ್ಯ ಬಿ.ಎಂ.ಭಟ್‌ ಸ್ವಾಗತಿಸಿ ಕೊನೆಗೆ ವಂದಿಸಿದರು.

Exit mobile version