Site icon Suddi Belthangady

ಉಜಿರೆ: ಎಸ್‌ಡಿಯಂ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ‘ಯಶಸ್ವೀ ಸಂದರ್ಶನ ಕೌಶಲ್ಯಗಳು’ ಕಾರ್ಯಕ್ರಮ

ಉಜಿರೆ: ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಜು.18ರಂದು ೞಯಶಸ್ವೀ ಸಂದರ್ಶನ ಕೌಶಲ್ಯಗಳುೞ ಎಂಬ ವಿಷಯದ ಕುರಿತು ಅಮೇರಿಕಾದ ಪ್ರತಿಷ್ಠಿತ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿ ಸಿದ್ದಾಂತ್ ಸುನಿಲ್ ಕುಮಾರ್ ರವರೊಂದಿಗೆ ವಿದ್ಯಾರ್ಥಿಗಳ ಸಂವಾದ ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳು ಉತ್ತಮವಾದ ಕೋಡಿಂಗ್ ಕೌಶಲ್ಯಗಳನ್ನು ಕರಗತ ಮಾಡಿಕೊಂಡು ಸಮಾಜಮುಖಿ ಆಪ್‌ಗಳನ್ನು ಅಭಿವೃಧ್ದಿ ಪಡಿಸುವತ್ತ ಗಮನ ಹರಿಸಬೇಕು.ಈ ನಿಟ್ಟಿನಲ್ಲಿ ನಡೆಯುವ ಹ್ಯಾಕಥಾನ್ಗಳಲ್ಲಿ ಭಾಗವಹಿಸುವಂತೆ ಮತ್ತು ಆಕರ್ಶಕವಾದ ವೈಯಕ್ತಿಕ ವೆಬ್‌ಸೈಟ್, ಲಿಂಕ್ಡ್‌ಇನ್ ಪ್ರೊಫೈಲ್ ನಿರ್ಮಿಸಿಕೊಂಡು ಹಾಗೂ ಸಮುದಾಯ ಸೇವೆಯೊಂದಿಗೆ ತಮ್ಮ ಸಂವಹನ ಕೌಶಲ್ಯಗಳನ್ನು ಸುಧಾರಿಸಿ ಕೊಳ್ಳುವಂತೆ ಸಿದ್ದಾಂತ್ ಮಾಹಿತಿಯನ್ನು ನೀಡಿ, ತಾವು ನಿರ್ಮಿಸಿರುವ ಪ್ರಾಜೆಕ್ಟ್ ಮತ್ತು ಆಪ್ ಅನ್ನು ಪರಿಚಯಿಸಿ ಅನುಭವ ಹಂಚಿಕೊಂಡರು.

ಡಾ. ಸಂದೀಪ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಪ್ರಾಂಶುಪಾಲ ಡಾ.ಅಶೋಕ ಕುಮಾರ್ ಧನ್ಯವಾದವಿತ್ತರು.

Exit mobile version