ಉಜಿರೆ : ಬೆಳಾಲು ಕ್ರಾಸ್ ನಲ್ಲಿರುವ ಸಾಯಿರಾಂ ಸೆಂಟರ್ ನ ಪ್ರಥಮ ಮಹಡಿಯಲ್ಲಿ ಕಿಂಗ್ & ಕ್ಯೂನ್ ಯುನಿಸೆಕ್ಸ್ ಸೆಲೂನ್ ಜು.15 ರಂದು ಶುಭಾರಂಭಗೊಂಡಿತು.
ಕಾರ್ಯಕ್ರಮದ ಮುಖ್ಯ ಅತಿಥಿ ತುಳುನಾಡ ಮಾಣಿಕ್ಯ ಚಲನಚಿತ್ರ ನಟ ಅರವಿಂದ್ ಬೋಳಾರ್ ಮಾತನಾಡಿ ಮನುಷ್ಯನಾಗಿ ಹುಟ್ಟಿದ ಮೇಲೆ ಅವನಿಗೆ ಉದ್ಯೋಗ ಬೇಕು.ಹಿಂದಿನ ಕಾಲದಲ್ಲಿ ಸೆಲೂನ್ ಕೆಲಸಕ್ಕೆ ಇಳಿಯುವವರು ಕಡಿಮೆಯಿದ್ದರು ಆದರೆ ಈ ಕಾಲಘಟ್ಟದಲ್ಲಿ ಈ ಉದ್ಯಮವನ್ನು ಹೆಣ್ಣುಮಕ್ಕಳು ಕೂಡ ಮಾಡುತ್ತಿರುವುದು ಶ್ಲಾಘನೀಯ.ಈ ಸಂಸ್ಥೆಯು ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ್ಯ ಅತಿಥಿ ವಾಲ್ಟರ್ ನಂದಳಿಕೆ ಮಾತನಾಡಿ ಮಹಿಳೆಯರು ಸ್ವಲಂಭಿಯಾಗುವಾಗ ತಮ್ಮ ಸ್ವಂತ ಪರಿಶ್ರಮದಿಂದ ಉದ್ಯಮ ನಡೆಸುವಾಗ ನಾವು ಅವರನ್ನು ಪ್ರೋತ್ಸಾಹಿಸಬೇಕು ಎಂದು ಹಾರೈಸಿದರು.
ಶುಭಾರಂಭದ ಪ್ರಯುಕ್ತ ಮೂರು ದಿನಗಳ ಕಾಲ ಶೇ.50ರಷ್ಟು ರಿಯಾಯಿತಿ ನೀಡಲಾಗಿತ್ತು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕಿ ಸ್ವಾತಿ, ಮಾಲಕಿ ನೀನಾ ರೋಡ್ರಿಗಸ್ ಉಪಸ್ಥಿತರಿದ್ದರು.