Site icon Suddi Belthangady

ಉಜಿರೆ: ಎಸ್.ಡಿ.ಎಂ. ಪ.ಪೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ‘ಕೊಡೆ ನಾ ನಿನ್ನ ಬಿಡೆ’ ಕಾರ್ಯಕ್ರಮ

ಉಜಿರೆ: ಬಿಸಿಲು ಹಾಗೂ ಮಳೆಯಿಂದ ರಕ್ಷಣೆಗೆ ಕೊಡೆ ಅತ್ಯಗತ್ಯ. ಈ ಭಾಗದ ಮಳೆಗೆ ಕೊಡೆಯ ಅಗತ್ಯ ಸಾಕಷ್ಟಿದೆ. ಮಳೆ ಬರುವಾಗ ಕೊಡೆ ಬಳಸದೆ ಇದ್ದರೆ ನಮ್ಮ ಆರೋಗ್ಯದ ಮೇಲೆ ತುಂಬಾ ದುಷ್ಪರಿಣಾಮ ಬೀರುತ್ತದೆ. ಅನೇಕ ರೋಗ ರುಜಿನಗಳಿಗೆ ಅವಕಾಶ ಆಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳಂತು ಕೊಡೆಯ ಬಳಕೆ ಮಾಡಲೇ ಬೇಕು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಅವರು ಹೇಳಿದರು.


ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆದ ಕೊಡೆ ನಾ ನಿನ್ನ ಬಿಡೆ ಎನ್ನುವ ವಿಶೇಷ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್, ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಹಾಗೂ ರಾ. ಸೇ ಯೋಜನೆಯ ನಾಯಕ ಸುದರ್ಶನ ನಾಯಕ್ ಉಪಸ್ಥಿತರಿದ್ದರು.ನಾಯಕಿ ದಕ್ಷಾ ನಿರೂಪಿಸಿ ವಂದಿಸಿದರು. ಸ್ವಯಂ ಸೇವಕ ವಿದ್ಯಾರ್ಥಿಗಳಿಂದ ಕಾಲೇಜಿನಾದ್ಯಂತ ಅಭಿಯಾನ ನಡೆಸಲಾಯಿತು.

Exit mobile version