Site icon Suddi Belthangady

‘ಪಿ.ಡೀಕಯ್ಯರವರ ಚಳುವಳಿಯ ಹೆಜ್ಜೆ ಗುರುತುಗಳು-ಒಂದು ಸ್ಮರಣೆ’ ಕಾರ್ಯಕ್ರಮ

ಬೆಳ್ತಂಗಡಿ: ಸಮಾನ ಮನಸ್ಕರ ಆಯೋಜನೆಯೊಂದಿಗೆ ನಾಡಿನ ಹಿರಿಯ ಅಂಬೇಡ್ಕರ್ ವಾದಿ, ಬಹುಜನ ಚಳುವಳಿಯ ಮುಖಂಡ “ಪಿ.ಡೀಕಯ್ಯರವರ ಚಳುವಳಿಯ ಹೆಜ್ಜೆ ಗುರುತುಗಳ ಅವಲೋಕನ” ಒಂದು ಸ್ಮರಣೆ ಕಾರ್ಯಕ್ರಮವು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಜು.16 ರಂದು ನಡೆಯಿತು.ಬಹುಜನ ಚಳುವಳಿಯ ಹಿರಿಯ ಮುಖಂಡ ಅಣ್ಣು ಸಾಧನ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದ ಉಪನ್ಯಾಸಕ ರಘು ಧರ್ಮಸೇನ್, ಮಾಜಿ ಜಿ.ಪಂ.ಸದಸ್ಯೆ ಸಿ.ಕೆ.ಚಂದ್ರಕಲಾ, ರಾಜೀವ ಕಕ್ಕೆಪದವು ಮುಂತಾದವರು ಮಾತನಾಡಿ ಪಿ.ಡೀಕಯ್ಯರವರ ಚಳುವಳಿಯ ಮಹತ್ವದ ಘಟನೆಗಳನ್ನು ಮೆಲುಕು ಹಾಕಿದರು.

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಉಪನ್ಯಾಸಕಿ ಡಾ.ಆಶಾಲತಾ ಪಿ., ಹಿರಿಯ ಮುಖಂಡರಾದ ಹೆಚ್.ಬಿ.ಮೋಹನ್, ಪದ್ಮನಾಭ ಅವರು ಡೀಕಯ್ಯರವರ ಚಳುವಳಿಯ ಹೆಜ್ಜೆ ಗುರುತುಗಳನ್ನು ನೆನಪಿಸಿಕೊಂಡು ಅವರ ಸೈದ್ಧಾಂತಿಕ ಆದರ್ಶಗಳನ್ನು ಅನುಸರಿಸಿದರೆ ಗೌರವ ಸಲ್ಲಿಸಿದಂತೆ ಎಂದು ಅಭಿಪ್ರಾಯಪಟ್ಟರು.

ಬಿ.ವಿ.ಎಫ್. ತಾಲೂಕು ಸಂಯೋಜಕ ಪ್ರಶಾಂತ್ , ನೀಲೇಶ್ ಪೆರಿಂಜೆ, ಮತ್ತಿತರರು ಉಪಸ್ಥಿತರಿದ್ದರು.ಪಿ.ಡೀಕಯ್ಯರವರ ನೇತೃತ್ವದ ಬಹುಜನ ಚಳುವಳಿಯಲ್ಲಿ ಗುರುತಿಸಿಕೊಂಡ ಹಿರಿಯ,ಕಿರಿಯ ಒಡನಾಡಿಗಳು ಪಾಲ್ಗೊಂಡು ನೆನಪುಗಳನ್ನು ಹಂಚಿಕೊಂಡರು.

ಚಳುವಳಿಯ ಮುಖಂಡ ಶಿವಪ್ಪ ಗರ್ಡಾಡಿ ಕಾರ್ಯಕ್ರಮ ನಿರೂಪಿಸಿದರು.ಬಹುಜನ ಚಳುವಳಿಯ ಮುಖಂಡ ಶ್ರೀನಿವಾಸ್ ಪಿ.ಎಸ್. ವಂದಿಸಿದರು.

Exit mobile version