ಉಜಿರೆ: ಮನುಷ್ಯನ ಜೀವನಕ್ಕೆ ವಿದ್ಯೆ, ಸಂಸ್ಕಾರ ಹಾಗೂ ಕೌಶಲ್ಯ ಅತಿ ಮುಖ್ಯ.ಒಂದಾದರೂ ಕೌಶಲ್ಯ ಇದ್ದರೆ ಜೀವನ ಸುಖಕರ ಆಗಿರುತ್ತದೆ.ಸಮಾಜದಲ್ಲಿ ಮಾತ್ರವಲ್ಲದೆ ಇತರ ಕಡೆ ಗುರುತಿಸಿಕೊಳ್ಳಲು ಇದರಿಂದ ಸಾಧ್ಯ.ಸ್ಮರಣ ಕೌಶಲ್ಯಕ್ಕೆ ಏಕಾಗ್ರತೆ ಹಾಗೂ ತೊಡಗಿಸಿಕೊಳ್ಳುವುದು ಮುಖ್ಯ.ಇದರೊಂದಿಗೆ ಮನಸ್ಸನ್ನು ಕೇಂದ್ರೀಕರಿಸಿಕೊಂಡರೆ ಅದ್ಭುತ ಸಾಧನೆ ನಮ್ಮಿಂದ ಸಾಧ್ಯ ಎಂದು ಉಜಿರೆಯ ಶ್ರೀ ಧ. ಮಂ.ಪ.ಪೂ. ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕ ಮಹಾವೀರ ಜೈನ್ ಹೇಳಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆದ ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ನಡೆದ ಸ್ಮರಣ ಶಕ್ತಿಗೊಂದು ಮೀಟುಗೋಲು ಎನ್ನುವ ವಿಶೇಷ ಸ್ಮರಣಶಕ್ತಿ ಕೌಶಲ್ಯ ತರಬೇತಿ ನೀಡುತ್ತಾ ಮಾತನಾಡಿದರು.ಸ್ಮರಣಶಕ್ತಿಯ ಪ್ರಾತ್ಯಕ್ಷಿಕೆಯನ್ನೂ ನಡೆಸಿದರು.
ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್, ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್, ನಾಯಕ ಸುದರ್ಶನ ನಾಯಕ್ ಹಾಗೂ ದಕ್ಷಾ ಉಪಸ್ಥಿತರಿದ್ದರು.ನಿರಂತ್ ಜೈನ್ ಸ್ವಾಗತಿಸಿ, ಕಿಶೋರ್ ಪಾಟೀಲ್ ವಂದಿಸಿ, ದುತಿಯಾ ನಿರೂಪಿಸಿದರು.