Site icon Suddi Belthangady

ಅಳದಂಗಡಿಯಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಹಣ್ಣು ಹಂಪಲು ಗಿಡ ನಾಟಿ

ಅಳದಂಗಡಿ : ಶೌರ್ಯ ವಿಪತ್ತು ನಿರ್ವಹಣಾ ಘಟಕ ಅಳದಂಗಡಿ ವಲಯ ಅರಣ್ಯದಲ್ಲಿ ಹಣ್ಣು ಹಂಪಲುಗಳ ಗಿಡ ನಾಟಿ ಕಾರ್ಯಕ್ರಮ ಜುಲೈ.14ರಂದು ಜರಗಿತು.ಸುಲ್ಕೇರಿಮೊಗರು ಗ್ರಾಮದ ನೇಲ್ಯಲ್ಕೆ ಅರಣ್ಯ ಪ್ರದೇಶದಲ್ಲಿ ಎಸ್ ಕೆ ಡಿ ಆರ್ ಡಿ ಪಿ ಅಳದಂಗಡಿ ವಲಯ ಸುಲ್ಕೇರಿಮೊಗರು ಗ್ರಾಮದ ಒಕ್ಕೂಟಗಳ ಪದಾಧಿಕಾರಿಗಳು ಹಾಗೂ ವಿಪತ್ತು ನಿರ್ವಹಣಾ ಸ್ವಯಂಸೇವಕರು ಜಂಟಿಯಾಗಿ ಹಣ್ಣು ಹಂಪಲುಗಳ ಗಿಡಗಳನ್ನು ನಾಟಿ ಮಾಡಿದರು.

ಹಲಸು, ಹೆಬ್ಬಲಸು, ಮಾವು, ನೆಲ್ಲಿ, ಪುನರ್ಪುಳಿ, ರೆಂಜೆ, ಅತ್ತಿ, ಹುಣಸೆ, ನೇರಳೆ ಮುಂತಾದ ಹಲವು ಜಾತಿಯ ಗಿಡಗಳ ನಾಟಿ ಮಾಡಲಾಯಿತು.

ಅಳದಂಗಡಿ ವಲಯ ಉಪ ಅರಣ್ಯಾಧಿಕಾರಿ ಸುರೇಶ್ ಗೌಡರವರು ಸ್ಥಳಕ್ಕೆ ಭೇಟಿ ನೀಡಿ ಮಾರ್ಗದರ್ಶನ ನೀಡಿದರು.ಗಿಡ ನೆಡುವಲ್ಲಿ ಅರಣ್ಯದ ಸಹಾಯಕ ಸಿಬ್ಬಂದಿ ಸಹಕರಿಸಿದರು.

ವಲಯ ಮೇಲ್ವಿಚಾರಕಿ ಸುಮಂಗಲ, ಸ್ಥಳೀಯ ಸೇವಾ ಪ್ರತಿನಿಧಿ ಕುಮಾರಿ ಸುಲೋಚನಾ, ಒಕ್ಕೂಟ ಪದಾಧಿಕಾರಿಗಳು ಹಾಗೂ ಸಂಯೋಜಕರಾದಹರಿಣಾಕ್ಷಿ, ಘಟಕ ಪ್ರತಿನಿಧಿ ಶಕುಂತಲಾ, ಸಂಯೋಜಕ ಶ್ರೀಕಾಂತ್, ಸ್ವಯಂಸೇವಕ ನಾರಾಯಣ ಸಾಲಿಯಾನ್, ಪ್ರಕಾಶ್ ಕೊಲ್ಲಂಗೆ, ರವಿ ಪೂಜಾರಿ, ರವಿಚಂದ್ರ, ಸ್ವಯಂ ಸೇವಕಿಯರಾದ ಆಶಾ, ರೂಪಶ್ರೀ, ನಳಿನಿ, ಹೇಮಾವತಿ, ಸರಸ್ವತಿ, ಅಮಿತಾ, ಸುಜಾತ, ಹರ್ಷಲ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಸಹಕರಿಸಿದರು.

ಸುಮಾರು 500ಗಿಡಗಳನ್ನು ನಾಟಿ ಮಾಡಲಾಯಿತು.

Exit mobile version