Site icon Suddi Belthangady

ಪುಂಜಾಲಕಟ್ಟೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ಹೋಗುವ ರಸ್ತೆ ಸಂಪೂರ್ಣ ಕೆಸರುಮಯ-ಮಕ್ಕಳಿಗೆ ಕೆಸರಿನಲ್ಲಿ ನಡೆಯುವ ಪರಿಸ್ಥಿತಿ

ಪುಂಜಾಲಕಟ್ಟೆ: ರಾಷ್ಟ್ರೀಯ ಹೆದ್ದಾರಿಯ ಸಮೀಪವಿರುವ ಪುಂಜಾಲಕಟ್ಟೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಹೋಗುವ ರಸ್ತೆಯು ಸಂಪೂರ್ಣ ಕೆಸರುಮಯವಾಗಿದ್ದು ಶಾಲೆಗೆ ಹೋಗುವ ಮಕ್ಕಳಿಗೆ ಕೆಸರಿನಲ್ಲಿಯೇ ಹೋಗುವ ಪರಿಸ್ಥಿತಿ ಎದುರಾಗಿದೆ.

ಮುಖ್ಯರಸ್ತೆಯ ಪಕ್ಕದಲ್ಲಿಯೇ ಕೆಸರು ತುಂಬಿದ್ದು, ವಾಹನದ ಸಂಚಾರವು ಹೆಚ್ಚಾಗಿದೆ ಇದರಿಂದಾಗಿ ಬೈಕ್ ನಲ್ಲಿ ಹೋಗುವ ಸಾರ್ವಜನಿಕರಿಗೆ ಹಾಗೂ ನಡೆದುಕೊಂಡು ಹೋಗುವ ಮಕ್ಕಳಿಗೆ ಕಷ್ಟಸಾದ್ಯವಾಗಿದೆ.ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಇದರ ಬಗ್ಗೆ ಗಮನಹರಿಸಿಬೇಕಾಗಿದೆ.

Exit mobile version