Site icon Suddi Belthangady

ಮಡಂತ್ಯಾರು ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ

ಮಡಂತ್ಯಾರು: ರೋಟರಿ ಕ್ಲಬ್ ಮಡಂತ್ಯಾರು ಇದರ ನೂತನ ಅಧ್ಯಕ್ಷ ಟಿ.ವಿ. ಶ್ರೀಧರ ರಾವ್ ಬಳಗ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು.13ರಂದು ಪಾರೆಂಕಿ ಮಹಿಷಮರ್ದಿನಿ ಸಭಾಭವನದಲ್ಲಿ ಜರಗಿತು.
ಮಡಂತ್ಯಾರು ರೋಟರಿ ಕ್ಲಬ್ ಕಳೆದ 4 ವರ್ಷಗಳಲ್ಲಿ ಸಮುದಾಯದ ಸರ್ವತೋಮುಖ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿ ಉತ್ತಮ ಕೆಲಸ ಕಾರ್ಯಗಳಿಂದ ಜಿಲ್ಲೆಯಲ್ಲಿ ಮಾದರಿ ಸಂಸ್ಥೆಯಾಗಿ ಬೆಳೆದಿದೆ. ಮಡಂತ್ಯಾರು ಪರಿಸರದ ಎಲ್ಲಾ ರಂಗಗಳ ಸಾಧಕರನ್ನು ಸದಸ್ಯರನ್ನಾಗಿ ಒಳಗೊಂಡಿರುವ ಮಡಂತ್ಯಾರ್ ಕ್ಲಬ್ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಈ ಹಿಂದಿನಿಂದಲೂ ಆಯೋಜಿಸಿಕೊಂಡು ಬಂದಿದೆ.

ಈ ಸಾಲಿನಲ್ಲಿ ಪ್ರಮುಖವಾಗಿ ಅಂಗನವಾಡಿ ಕೇಂದ್ರಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಪ್ರಾಥಮಿಕ ಪ್ರೌಢಶಾಲಾ ಮಕ್ಕಳ ಮಾನಸಿಕ ಅರೋಗ್ಯ ಶಿಬಿರ, ಮಳೆ ಕೊಯ್ಲು ಮತ್ತು ಜಲಜಾಗೃತಿ ಇಂತಹ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದರು.ಪದಗ್ರಹಣ ಅಧಿಕಾರಿಯಾಗಿ ಅಸಿಂಟೆಂಟ್ ರೋಟರಿ ಕೋ.ಆರ್ಡಿನೇಟರ್ ರೋಟೆರಿಯನ್ ಎಂ.ರಂಗನಾಥ್ ಭಟ್, ಮುಖ್ಯ ಅಥಿತಿಗಳಾಗಿ ಅಸಿಸ್ಟೆಂಟ್ ಗವಾರ್ನರ್ ರಾಘವೇಂದ್ರ ಭಟ್, ಝೋನಲ್ ಆಫೀಸರ್ ಶೃತಿ ಮಾಡ್ತಾ, ಪಾರೆಂಕಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಠಲ ಶೆಟ್ಟಿ, ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರು ಫಾ.ಸ್ಟ್ಯಾನಿ ಗೋವಿಯಸ್, ರೊನಾಲ್ಡ್ ಸಿಕ್ವೇರಾ, ಹರ್ಷ ನಾರಾಯಣ ಶೆಟ್ಟಿ, ರೋಟರಿ ಕ್ಲಬ್ ನೂತನ ಅಧ್ಯಕ್ಷ ರೋ. ಟಿ. ವಿ. ಶ್ರೀಧರ ರಾವ್, ಕಾರ್ಯದರ್ಶಿಯಾಗಿ ರೋ.ನಿತ್ಯಾನಂದ ಬಿ , ಕೋಶಾಧಿಕಾರಿಯಾಗಿ ರೋ.ದಿನಕರ ಶೆಟ್ಟಿ, ಇತರ ಪದಾಧಿಕಾರಿಗಳಾದ ರೋ. ಕಾಂತಪ್ಪ ಗೌಡ , ರೋ. ಮೋನಪ್ಪ ಪೂಜಾರಿ, ರೋ ತುಳಸಿದಾಸ್ ಪೈ, ರೋ. ಜಯಂತ ಶೆಟ್ಟಿ, ರೋ. ಟಿ. ರಾಮ್ ಭಟ್, ರೋ. ಹರ್ಷ ನಾರಾಯಣ ಶೆಟ್ಟಿ, ರೋ. ಫ್ರಾನ್ಸಿಸ್ ವಿ. ವಿ. ರೋ. ಉದಯ ಕುಮಾರ್ ಜೈನ್, ರೋ.ಸುರೇಶ್ ಸೋಣಂದೂರು, ರೋ. ಪ್ರಶಾಂತ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Exit mobile version