ಉಜಿರೆ: ಜುಲೈ 23ರಂದು ನಡೆಯುವ ಉಜಿರೆ ಗ್ರಾಮ ಪಂಚಾಯತ್ ನ ವಾರ್ಡ್ 4ರ ಉಪಚುನಾವಣೆ ನಡೆಯುತ್ತಿದ್ದು ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಈ ಮೂವರ ನಾಮಪತ್ರವೂ ಕೂಡ ಕ್ರಮಬದ್ಧವಾಗಿದೆ.
ಅನಿಲ್ ಪ್ರಕಾಶ್ ಡಿಸೋಜ, ಪ್ರಕಾಶ್ ಫೆರ್ನಾಂಡೀಸ್ ಮತ್ತು ರಮೇಶ್ ಶೆಟ್ಟಿಯವರು ಈಗಾಗ್ಲೇ ನಾಮಪತ್ರ ಸಲ್ಲಿಸಿದ್ದಾರೆ. ಇವರ ನಾಮಪತ್ರ ಕ್ರಮಬದ್ಧವಾಗಿದೆ. ನಾಮಪತ್ರ ಹಿಂಪಡೆಯಲು ಜುಲೈ 15 ರವರೆಗೆ ಕಾಲಾವಕಾಶ ಇದ್ದು, ಯಾರೂ ಕೂಡ ಈ ವರೆಗೆ ನಾಮಪತ್ರ ಹಿಂಪಡೆದುಕೊಂಡಿಲ್ಲ. ಸುದ್ದಿ ವೆಬ್ ಸೈಟ್ ನಲ್ಲಿ ಒಬ್ಬರ ನಾಮಪತ್ರ ವಾಪಾಸ್ ಎಂದು ಪ್ರಕಟವಾದ ವರದಿ ಸತ್ಯಕ್ಕೆ ದೂರವಾದದ್ದು ಇದಕ್ಕೆ ಸುದ್ದಿ ವಿಷಾದ ವ್ಯಕ್ತಪಡಿಸುತ್ತದೆ.
ಚುನಾವಣಾಧಿಕಾರಿ ಜೋಸೆಫ್, ಮತ್ತು ಸಹಾಯಕ ಚುನಾವಣಾಧಿಕಾರಿ ಪ್ರಕಾಶ್ ಶೆಟ್ಟಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.