ಬೆಳ್ತಂಗಡಿ : ಚರ್ಚ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬೆಳ್ತಂಗಡಿಯಲ್ಲಿ ಪೋಷಕರ ಸಭೆಯು ಜು.12ರಂದು ನಡೆಯಿತು.
ಈ ಸಭೆಗೆ ಸಂಪನ್ಮೂಲ ವ್ಯಕ್ತಿಯಾಗಿ ಗುರುವಾಯನಕರೆ ಕ್ಲಸ್ಟರ್ ಸಿಆರ್ ಪಿ ರಾಜೇಶ್ ಆಚಾರ್ಯ, ಪೋಷಕರು ಮಕ್ಕಳನ್ನು ಹೇಗೆ ಬೆಳೆಸಬೇಕು ಹಾಗೂ ಮೊಬೈಲ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಅತೀ ವಂ. ಫಾದರ್ ವಾಲ್ಟರ್ ಡಿ’ ಮೆಲ್ಲೊರವರು ವಹಿಸಿದ್ದರು. ಅಧ್ಯಕ್ಷ ಭಾಷಣದಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರು ಮತ್ತು ಪೋಷಕರು ಒಟ್ಟಾಗಿ ಶ್ರಮಿಸಬೇಕೆಂದು ತಿಳಿಸಿ ಶೈಕ್ಷಣಿಕ ವರ್ಷಕ್ಕೆ ಶುಭ ಹಾರೈಸಿದರು.
ಮುಖ್ಯೋಪಾಧ್ಯಾಯಿನಿ ರೆನ್ನಿ ವಾಸ್ ರವರು ಶಾಲಾ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳನ್ನು ತಿಳಿಸಿದರು. ಮಂಜುನಾಥ್ ಕುಮಾರ್ ಇವರು ಕಾರ್ಯ ನಿರೂಪಣೆ ಮಾಡಿದರು. ಜೂಲಿಯೆಟ್ ಲೋಬೊ ಸ್ವಾಗತಿಸಿದರು. ಉಷಾ ನಾಯಕ್ ಧನ್ಯವಾದವಿತ್ತರು.