ಬೆಳ್ತಂಗಡಿ: ಹೋಲಿ ರೆಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಜುಲೈ 12ರಂದು ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಪರಿಸರ ಸಂಘದ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು. ವಿದ್ಯಾರ್ಥಿನಿ ಯಶಸ್ವಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮಹತ್ವವನ್ನು ತಿಳಿಸಿದರು.
ವಿದ್ಯಾರ್ಥಿಗಳು ಔಷಧೀಯ ಸಸ್ಯಗಳನ್ನು ಪರಿಚಯಿಸಿ ಅದರ ಉಪಯೋಗವನ್ನು ತಿಳಿಸಿದರು. ಹಾಡು, ನೃತ್ಯ ಮತ್ತು ನಟನೆಯ ಮೂಲಕ ಪರಿಸರ ನಾಶ ಮತ್ತು ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ಮಕ್ಕಳು ತಮ್ಮ ಮನೆಯಂಗಳದಲ್ಲಿ ಗಿಡವನ್ನು ನೆಟ್ಟು ಪೋಷಿಸಿ ಬೆಳೆಸುವುದರ ಮೂಲಕ ಪರಿಸರ ಸಂರಕ್ಷಣೆಗೆ ತಮ್ಮ ಕಿರು ಕಾಣಿಕೆಯನ್ನು ನೀಡಬೇಕೆಂದು ನುಡಿದು ಶುಭ ಹಾರೈಸಿದರು.
ಶಾಲಾ ಪರಿಸರದಲ್ಲಿ ಗಿಡ ನೆಡುವ ಮೂಲಕ ವನಮೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪರಿಸರ ಸಂಘದ ಶಿಕ್ಷಕಿಯರಾದ ಕು. ವಿನಿತಾ ಮೋರಸ್ ಹಾಗೂ ಶ್ರೀಮತಿ ಪ್ರಭಾ ಗೌಡ ಸಹಕರಿಸಿದರು.