Site icon Suddi Belthangady

ಬೆಳ್ತಂಗಡಿ: ರಾಹುಲ್ ಗಾಂಧಿ ಸಂಸದ ಸದಸ್ಯತ್ವ ಅನರ್ಹಗೊಳಿಸಿದ ವಿಚಾರ- ಬ್ಲಾಕ್ ಕಾಂಗ್ರೆಸ್ ಕಛೇರಿ ಎದುರು ಮೌನ ಪ್ರತಿಭಟನೆ

ಬೆಳ್ತಂಗಡಿ: ರಾಹುಲ್ ಗಾಂಧಿ ಅವರ ಸಂಸದ ಸದಸ್ಯತ್ವ ಅನರ್ಹಗೊಳಿಸಿದ ಬಗ್ಗೆ ಬೆಳ್ತಂಗಡಿ ಮೂರು ಮಾರ್ಗದ ಬಳಿ ಬ್ಲಾಕ್ ಕಾಂಗ್ರೆಸ್ ಕಛೇರಿ ಎದುರು ಮೌನ ಪ್ರತಿಭಟನೆಯು ಬ್ಲಾಕ್ ಕಾಂಗ್ರೆಸ್ ವತಿಯಿಂದ ಜು.12ರಂದು ನಡೆಯಿತು.

ಮಾಜಿ ಸಚಿವ ಕೆ ಗಂಗಾಧರ ಗೌಡ ಮಾತನಾಡಿ “ಭಾರತವನ್ನು ಒಗ್ಗೂಡಿಸುವ ಉದ್ದೇಶಕ್ಕಾಗಿ ರಾಹುಲ್ ಗಾಂಧಿಯವರು ದೇಶದ ಉದ್ದಗಲಕ್ಕೂ ನಡೆಸಿದ ಪಾದಯಾತ್ರೆಯ ಯಶಸ್ಸನ್ನು ಸಹಿಸದ ಕೇಂದ್ರ ಸರಕಾರ,ಹಳೆ ಪ್ರಕರಣವನ್ನು ಎತ್ತಿಕೊಂಡು ಕೇಸು ದಾಖಲಿಸಿ ಇಡೀ ವ್ಯವಸ್ಥೆಗಳನ್ನೇ ಕೈಗೊಂಬೆಯಾಗಿಸಿ ಅವರ ಸದಸ್ಯತ್ವ ರದ್ದು ಪಡಿಸಿದೆ.

ಕೀಳು ರಾಜಕೀಯದ ಮೂಲಕ ಕಾಂಗ್ರೆಸ್ ಹಾಗೂ ಇಂದಿರಾ ಗಾಂಧಿ ಕುಟುಂಬವನ್ನು ನಾಶ ಮಾಡುವ ಬಿಜೆಪಿಯವರ ಯಾವುದೇ ಪ್ರಯತ್ನಗಳು ಸಫಲವಾಗದಾಗ ಇಂತಹ ದುಷ್ಟ ಯೋಚನೆಗಳನ್ನು ಮಾಡುತ್ತಿರುವುದು ವಿಪರ್ಯಾಸವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೂ ಕೇಂದ್ರ ಸರಕಾರ ದಬ್ಬಾಳಿಕೆ ನೀತಿ ಅನುಸರಿಸುತ್ತಿದ್ದು ಅಭಿವೃದ್ಧಿ ಕುಂಠಿತಗೊಳಿಸಲು ಯತ್ನಿಸುತ್ತಿದೆ” ಎಂದರು.


ಮಾಜಿ ಶಾಸಕ ಕೆ ವಸಂತ ಬಂಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶೈಲೇಶ್ ಕು‌ಮಾರ್, ರಂಜನ್ ಜಿ.ಗೌಡ, ಕೆ.ಪಿ‌.ಸಿ.ಸಿ ಸದಸ್ಯರುಗಳಾದ ಮೋಹನ ಶೆಟ್ಟಿಗಾರ್, ಕೇಶವ ಗೌಡ, ಪಕ್ಷದ ಮುಖಂಡರುಗಳಾದ ಅಬ್ದುಲ್ ರಹೆಮಾನ್ ಪಡ್ಪು, ಲೋಕೇಶ್ವರಿ ವಿನಯ ಚಂದ್ರ, ಇ.ಸುಂದರ ಗೌಡ, ಅಭಿನಂದನ್ ಹರೀಶ್, ಉಷಾ ಶರತ್, ಎ.ಸಿ. ಮ್ಯಾಥ್ಯೂ, ಅಶ್ರಫ್ ನೆರಿಯ, ಸಲೀಂ ಗುರುವಾಯನಕೆರೆ, ಮೆಹಬೂಬ್, ಬಿ.ಕೆ. ವಸಂತ್, ಜಗದೀಶ್ ಡಿ., ಹಾಗೂ ಇತರರು ಉಪಸ್ಥಿತರಿದ್ದರು.
ಒಂದು ಗಂಟೆ ಕಾಲ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದರು.

Exit mobile version