ಬೆಳ್ತಂಗಡಿ: ಸಂತ ತೆರೇಸಾ ಪ್ರೌಢಶಾಲೆಯ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು 8 ಸಂಘಗಳಲ್ಲಿ ಹಂಚಿ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಜು.10ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಸಾಹಿತ್ಯ ಸಂಘ, ಕ್ರೀಡಾ ಸಂಘ, ಇಕೋ ಕ್ಲಬ್, ಮೀನಾ ಸಂಘ, ವಿಜ್ಞಾನ ಸಂಘ, ಬ್ಲೂಮ್ಸ್, ಗಣಿತ ಸಂಘ ಮತ್ತು ಶಾಲಾ ಸಂಸತ್ತು ಎಂಬ ವಿಂಗಡನೆ ಮಾಡಲಾಯಿತು. ಪ್ರತೀ ಸಂಘದ ಸದಸ್ಯರು ತಮ್ಮ ಮೇಲ್ವೀಚಾರಕರ ನೇತೃತ್ವದಲ್ಲಿ ವಿಭಿನ್ನ ಮಾದರಿಯಲ್ಲಿ ಉದ್ಘಾಟನೆ ನೆರವೇರಿಸಿದರು. ಪ್ರತೀ ಸಂಘದ ಅದ್ಯಕ್ಷರಿಗೆ ಗುರುತಿನ ಪಟ್ಟಿಯನ್ನು ಮುಖ್ಯೋಪಾಧ್ಯಯನಿಯವರು ತೊಡಿಸಿ ವಿದ್ಯುಕ್ತವಾಗಿ ಚಾಲನೆ ನೀಡಿದರು. ಅಭಿಜ್ಞಾ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನೇ ತೊಡಗಿಸಿ ತಮಗೆ ಸಿಕ್ಕಿದ ಅವಕಾಶಗಳನ್ನು ಉತ್ತಮವಾಗಿ ಬಳಸಿ ಬೆಳೆಯಬೇಕೆಂದು ಮುಖ್ಯೋಪಾದ್ಯಾಯಿನಿಯವರು ಕರೆ ನೀಡಿದರು.