Site icon Suddi Belthangady

ಪರಮಪೂಜ್ಯ ಮುನಿಶ್ರೀ 108 ಕಾಮಕುಮಾರನಂದಿ ಮುನಿಮಹಾರಾಜರ ಬರ್ಬರ ಹತ್ಯೆಯನ್ನು ಖಂಡಿಸಿ ಸಮಗ್ರ ತನಿಖೆಗಾಗಿ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗ ಹಾಗೂ ಸಮಸ್ತ ಜೈನ ಸಮಾಜ ಅವಿಭಜಿತ ದ.ಕ ಜಿಲ್ಲೆ ವತಿಯಿಂದ ಮಂಗಳೂರಿನಲ್ಲಿ ಮೌನ ಪ್ರತಿಭಟನಾ ಮೆರವಣಿಗೆ

ಮಂಗಳೂರು: ದಿಗಂಬರ ಜೈನ ಮುನಿಗಳಾದ ಪರಮಪೂಜ್ಯ ಮುನಿಶ್ರೀ 108 ಕಾಮಕುಮಾರನಂದಿ ಮುನಿಮಹಾರಾಜರ ಬರ್ಬರ ಹತ್ಯೆಯನ್ನು ಖಂಡಿಸಿ ಸಮಗ್ರ ಉನ್ನತವಾದ ತನಿಖೆಗಾಗಿ ಮತ್ತು ಜೈನ ಸಮಾಜದ ಉಳಿದ ಮುನಿಗಳಿಗೆ , ತ್ಯಾಗಿಗಳಿಗೆ ಸೂಕ್ತ ರಕ್ಷಣೆಯನ್ನು ನೀಡಲು ಸರಕಾರ ಕ್ರಮ ಕೈಗೋಳ್ಳಬೇಕಾಗಿ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗ ನೇತೃತ್ವದಲ್ಲಿ ಸಮಸ್ತ ಜೈನ ಸಮಾಜ ನಗರದಲ್ಲಿ ಜು.10ರಂದು ಮೌನ ಪ್ರತಿಭಟನಾ ಮೆರವಣಿಗೆ ನಡಿಸಿ ದ.ಕ ಜಿಲ್ಲಾಧಿಕಾರಿ ಮೂಲಕ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳದ ಶ್ರೀ ಸಿದ್ದರಾಮಯ್ಯ ಮನವಿ ಪತ್ರವನ್ನು ಸಲ್ಲಿಸಲಾಗಿತು.

ಈ ಸಂದರ್ಭದಲ್ಲಿ ಮೂಡುಬಿದಿರೆ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ದಿವ್ಯ ಸಾನಿಧ್ಯ ವಹಿಸಿದ್ದರು.
ಪುಷ್ಪರಾಜ್ ಜೈನ್ ಮಂಗಳೂರು, ಸುರೇಶ್ ಬಲ್ಲಾಳ್ ಮಂಗಳೂರು, ಸುದರ್ಶನ್ ಜೈನ್ ಬಂಟ್ವಾಳ, ರತ್ನಾಕರ್ ಜೈನ್ ಮಂಗಳೂರು , ಜಗತ್ಪಾಲ್ ಜೈನ್, ಮಹಾವೀರ್ ಪ್ರಸಾದ್, ಶ್ವೇತಾ ಜೈನ್ ಮೂಡುಬಿದಿರೆ, ಸುಭಾಷ್ ಚಂದ್ರ ಜೈನ್ ಬಂಟ್ವಾಳ, ವರ್ಧಮನ್ ಜೈನ್, ಸುದೇಶ್ ಜೈನ್ ಮಕ್ಕಿಮನೆ ಸಹಿತ ಅನೇಕ ಗಣ್ಯರು, ಜೈನ ಸಮಾಜದ ಶ್ರಾವಕ – ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ನಗರದ ಕ್ಲಾಕ್ ಟವರ್ ನಿಂದ ಜಿಲ್ಲಾಧಿಕಾರಿ ಕಚೇರಿ ಯವರಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಯಿತು.

Exit mobile version