ಬೆಳಗಾವಿಯ ಚಿಕ್ಕೋಡಿಯಲ್ಲಿ ಜೈನ ಮುನಿಯೊಬ್ಬರ ಬರ್ಬರ ಹತ್ಯೆ ಮಾಡಲಾಗಿದೆ. ಇದರಿಂದ ಜೈನ ಸಮಾಜ ಆಘಾತಕ್ಕೆ ಒಳಗಾಗಿದೆ. ಮೈಕ್ರೋ ಸಂಖ್ಯೆಯಲ್ಲಿರುವ ಜೈನರಿಗೆ ಭಾರತದಲ್ಲಿಯೇ ಅದೂ ಮೂಲನಿವಾಸಿಗಳಾದ ಜೈನರಿಗೆ ಭಾರತದಲ್ಲಿಯೇ ಅಭದ್ರತೆಯ ವಾತಾವರಣ ಉಂಟಾಗಿರುವುದು ವಿಷಾದನೀಯ.
ಜೈನ ಮುನಿಯೊಬ್ಬರ ಕ್ಷುಲ್ಲಕ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ. ಸಹಾಯ ಪಡೆದುಕೊಂಡವರೇ ಕೃತಘ್ನರಾಗಿ ಹತ್ಯೆಗೈದಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣಬರುತ್ತದೆ.
ಜೈನರು ಅಹಿಂಸಾವಾದಿಗಳು, ವಿಶ್ವಕ್ಕೆ ಶಾಂತಿಯನ್ನು ಬಯಸುವವರು ಹಾಗೂ ಬೇರೆಯವರ ಸುಖವನ್ನು ಬಯಸುವವರು.
ಈಗ ಜೈನರಿಗೆ ಭದ್ರತೆಯ ಜೊತೆಗೆ ರಕ್ಷಣೆ ಒದಗಿಸಬೇಕಾದದ್ದು ಸರಕಾರದ ಮೂಲ ಕರ್ತವ್ಯ. ರಾಜ್ಯ ಸರಕಾರ ಜೈನರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಬೇಕಾದದ್ದು ಕರ್ತವ್ಯ. ಕೊಲೆಪಾತಕರಲ್ಲೂ ಜಾತಿಯನ್ನು ನೋಡದೇ ಕಾನೂನು ಪ್ರಕಾರ ಶಿಕ್ಷೆಯನ್ನು ಕೊಡಿ. ಜೈನರಿಗೆ ರಕ್ಷಣೆಯನ್ನು ನೀಡಿ. ನಿಷ್ಪಕ್ಷಪಾತವಾಗಿ ಜೈನರಿಗೆ ನ್ಯಾಯವನ್ನು ದೊರಕಿಸಿಕೊಡ ಬೇಕು.
ಅದು ಕೂಡ ವಿಶ್ವಶಾಂತಿ ಗಾಗಿ ತಮ್ಮ ಮನೆ ಮಠಗಳನ್ನು ತೊರೆದು ದೇವರ ಜ್ಞಾನವನ್ನೇ ಮಾಡುತ್ತಾ ವಿಶ್ವಕ್ಕೆ ಶಾಂತಿ ಸಿಗಬೇಕೆ ಎನ್ನುವ ಮೂಲ ಉದ್ದೇಶದಿಂದ ಸರ್ವಸ್ವವನ್ನು ತ್ಯಾಗ ಮಾಡಿದ ಇಂತಹ ಮಹಾನ್ ಮುನಿವರಿಯರಿಗೆ ಈ ರೀತಿ ಆಗಿರುವುದು ಇದು ಖಂಡನೀಯ ವಿಚಾರವಾಗಿದೆ.
ಆದ್ದರಿಂದ ತಪ್ಪಿತಸ್ಥರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳುವುದರ ಜೊತೆ ಜೊತೆಗೆ ವಿಶ್ವದಲ್ಲಿ ಇನ್ನಷ್ಟು ಕಾಲ ಶಾಂತಿ ನೆಲೆಸುವ ಕಾರ್ಯ ಮಾಡುತ್ತಿರುವ ಉಳಿದ ಮುನಿ ಪರಂಪರೆಗೆ ರಕ್ಷಣೆಯನ್ನು ನೀಡಲೇಬೇಕು ಎಂದು ಬೆಳ್ತಂಗಡಿ ತಾಲೂಕಿನ ವಿಧಾನಸಭಾ ಸದಸ್ಯರಾದ ಹರೀಶ್ ಪೂಂಜಾ ರವರು ಪತ್ರಿಕಾ ಹೇಳಿಕೆ ಮುಖಾಂತರ ಖಂಡನೆಯನ್ನು ವ್ಯಕ್ತಪಡಿಸಿದರು.