Site icon Suddi Belthangady

ಕನ್ಯಾಡಿ: ಶ್ರೀ ಗುರುದೇವ ಮಠಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

ಧರ್ಮಸ್ಥಳ: ಕರ್ನಾಟಕ ಸರಕಾರದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಜು.8 ರಂದು ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನಮ್ ನ ಗುರುದೇವ ಮಠಕ್ಕೆ ಭೇಟಿ ನೀಡಿ ಚಾತುರ್ಮಾಸ್ಯ ವೃತದಲ್ಲಿರುವ ಕ್ಷೇತ್ರದ ಮಠಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದವರು.

ಕ್ಷೇತ್ರದ ವತಿಯಿಂದ ಸಚಿವರನ್ನು ಸ್ವಾಮೀಜಿ ಗೌರವಿಸಿದರು.

ಮಠದಲ್ಲಿ ನಡೆಯುವತ್ತಿರುವ ಚಾತುರ್ಮಾಸ್ಯ ಸಂದರ್ಭದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆಗೆ ತಡೆಗೋಡೆ ನಿರ್ಮಾಣ ಕ್ಕೆ ಅನುದಾನ ನೀಡಲು ಸಚಿವರಿಗೆ ಮನವಿ ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಉಬಯ ಸಮಿತಿಯ ಅಧ್ಯಕ್ಷರಾದ ಕೆ. ಶೈಲೇಶ್ ಕುಮಾರ್, ರಂಜನ್ ಜಿ. ಗೌಡ, ಪ್ರಮುಖರಾದ ಶೇಖರ್ ಕುಕ್ಕೆಡಿ, ರಾಜಶೇಖರ ಶೆಟ್ಟಿ, ಸತೀಶ್ ಕೆ. ಕಾಶೀಪಟ್ಣ, ನೋಟರಿ ವಕೀಲ ಭಗೀರಥ ಜಿ., ಗುತ್ತಿಗೆದಾರ ನಾಗೇಶ್ ಕುಮಾರ್, ಮಠದ ಟ್ರಷ್ಟಿ ತುಕಾರಾಮ್ ಸಾಲಿಯಾನ್, ಮಠದ ಸಿಬ್ಬಂದಿಗಳು ಹಾಜರಿದ್ದರು.

Exit mobile version