ಮಚ್ಚಿನ ಗ್ರಾಮದ ಕಿನ್ನಿಪಲ್ಕೆ ಜಯ ಪೂಜಾರಿ ಇವರ ಹಟ್ಟಿಗೆ ನಿನ್ನೆ(ಜು.6) ರಾತ್ರಿ ಅಕಸ್ಮಾತ್ ಬೆಂಕಿ ತಗಲಿ, ಸಂಪೂರ್ಣ ಸುಟ್ಟು ಹಾನಿಯಾಗಿದ್ದು, ಹಟ್ಟಿಯಲಿದ್ದ ತೆಂಗಿನಕಾಯಿ ಮಳೆಗಾಲಕ್ಕೆ ಶೇಖರಿಸಿ ಇಟ್ಟಿದ್ದ ಕಟ್ಟಿಗೆ ಹಾಗೂ ಇತರ ವಸ್ತುಗಳು ಪೂರ್ತಿ ಸುಟ್ಟು, ಕರಗಿ ತುಂಬು ನಷ್ಟವಾಗಿದ್ದು, ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಕಾಂತ ನಿಡ್ಡಜೆ, ಗ್ರಾಮಕರಿಣೀಕ ಸತೀಶ್ ಪಿಂಟೋ ಭೇಟಿ ನೀಡಿ ಪರಿಶೀಲಿಸಿದರು.