Site icon Suddi Belthangady

ಉರುವಾಲು ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷ ಪುತ್ತುಮೋನು ಹಾಜಿ ನಿಧನ

ಉರುವಾಲು ಇಲ್ಲಿಯ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷ, ಕೃಷಿಕ ಪುತ್ತುಮೋನು ಹಾಜಿ ಇಚ್ಚೂರು (80ವ) ಇವರು ಜು.6ರಂದು ನಿಧನ ಹೊಂದಿದರು.

ಇವರು ಆರೋಗ್ಯವಂತರಾಗಿದ್ದು ನಿನ್ನೆ ಕಾರು ಚಲಾಯಿಸಿಕೊಂಡು ಉಪ್ಪಿನಂಗಡಿ ಪೇಟೆಗೆ ಹೋಗಿ ಬಂದು, ಮನೆಯಲ್ಲಿ ಸ್ನಾನ ಮಾಡಿದ ನಂತರ ಆರೋಗ್ಯದಲ್ಲಿ ಏರುಪೇರು ಕಂಡು ಸಾವನ್ನಪ್ಪಿದ್ದಾರೆ.

ಇವರು ಉರುವಾಲು ಪದವಿನ ಮಸೀದಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದು, ಹಲವಾರು ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಮೃತರು ಪತ್ನಿ, ಆರು ಹೆಣ್ಣು, ನಾಲ್ಕು ಗಂಡು ಮಕ್ಕಳು, ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಸೇರಿದಂತೆ ಕುಟುಂಬಸ್ಥರು, ಬಂದು ಮಿತ್ರಾದಿಗಳನ್ನು ಅಗಲಿದ್ದಾರೆ.

Exit mobile version