Site icon Suddi Belthangady

ಬೆಳ್ತಂಗಡಿ: ಅನುಗ್ರಹ ಕ್ಲಿನಿಕ್ ಉದ್ಘಾಟನೆ

ಬೆಳ್ತಂಗಡಿ : ಜು.7ರಂದು ಬೆಳ್ತಂಗಡಿಯ ಬಸ್‌ ನಿಲ್ದಾಣದ ಎದುರುಗಡೆಯ ಸಾಂತೋಮ್ ಟವರ್ಸ್ ನಲ್ಲಿ ಅನುಗ್ರಹ ಕ್ಲಿನಿಕ್ ಶುಭಾರಂಭಗೊಂಡಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಉಜಿರೆಯ ಶ್ರೀ ಜನಾರ್ಧನ ಸ್ವಾಮಿ ದೇವಾಸ್ಥಾನದ ಆಡಳಿತ ಮೋಕ್ತೆಸರರಾದ ಶರತ್ ಕೃಷ್ಣ ಪಡ್ವೆಟ್ನಾಯರು, ಡಿ.ಕೆ.ಆರ್.ಡಿ.ಎಸ್.ನಿರ್ದೇಶಕರಾದ ಫಾ| ಬಿನೋಯ್ , ಲೈಲಾ ಮಸೀದಿಯ ಧರ್ಮಗುರುಗಳಾದ ಹಂಝ ಮದನಿ ಮುಖ್ಯ ಅತಿಥಿಗಳಾಗಿದ್ದರು.

ಈ ಸಂದರ್ಭದಲ್ಲಿ ಬೆನಕ ಹಾಸ್ಪಿಟಲ್ ನ ಡಾ.ಗೋಪಾಲಕೃಷ್ಣ, ಡಾ.ಭಾರತಿ ಗೋಪಾಲಕೃಷ್ಣ, ಡಾ.ಅಶ್ವಿನ್ ಕುಮಾರ್, ಡಾ.ಗೋವಿಂದ ಕಿಶೋರ್, ಡಾ.ವಿನಯ ಕಿಶೋರ್, ಡಾ.ರಾಘವೇಂದ್ರ ಪಿದಾಮಲೈ, ಟಿ.ಜೆ. ಮೊರಾಸ್, ಪ್ರಭಾತ್ ಭಟ್, ರಾಘವೇಂದ್ರ ಕಿಣಿ, ಗಣಪತಿ ಭಟ್, ಯಶವಂತ್, ಬಿ.ಎಂ.ಅನೀಫ್, ಹೆರಾಲ್ಡ್ ಪಿಂಟೊ, ಮೆಲ್ಬಿ ಪಿ.ಸಿ., ತಲಹತ್ ಎಂ.ಜಿ., ಅಶ್ವಿನಿ ಫರ್ನಾಂಡೀಸ್ ತಾಲೂಕಿನ ವೈದ್ಯಾಧಿಕಾರಿಗಳು ಹಾಗೂ ಹಿತೈಷಿಗಳು ಪಾಲ್ಗೊಂಡಿದ್ದರು.
ಬಂದ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಡಾ.ರಂಜನ್ ಕುಮಾರ್ ರವರು ಕಳೆದ 17 ವರ್ಷಗಳಿಂದ ಉಜಿರೆ ಹಾಗೂ ಬೆಳ್ತಂಗಡಿಯ ಜನತೆಗೆ ವೈದ್ಯಕೀಯ ಸೇವೆ ನೀಡುತ್ತಿದ್ದು, ಈ ಹೊಸ ಕ್ಲಿನಿಕ್‌ನಲ್ಲಿ ಬೆಳಗ್ಗೆ 9ರಿಂದ ಸಾಯಂಕಾಲ 6 ಗಂಟೆಯವರೆಗೆ ಎಲ್ಲಾ ತರಹದ ವೈದ್ಯಕೀಯ ಸೂಕ್ತ ಸಲಹೆ ಮತ್ತು ಚಿಕಿತ್ಸೆ ಲಭ್ಯವಿರುವುದಾಗಿ ತಿಳಿಸಿದರು.

ಜ್ವರ, ಶೀತ, ಕೆಮ್ಮು, ಬಿಪಿ, ಶುಗರ್ ಮುಂತಾದ ಸಾಮಾನ್ಯ ಖಾಯಿಲೆಗಳಲ್ಲದೆ ವಿಶೇಷವಾಗಿ ಥೈರಾಯ್ಡ್ , ಅಲರ್ಜಿ, ಅಸ್ತಮಾ, ವರ್ಟಿಗೋ, ಮೈಗ್ರೇನ್, ಕ್ಯಾನ್ಸರ್, ಕಿವುಡುತನ, ಕಿವಿ, ಮೂಗು, ಗಂಟಲು, ರಕ್ತಹೀನತೆ ಮತ್ತು ಅಪೌಷ್ಟಿಕತೆ, ಧೂಮಪಾನ ಮತ್ತು ಮದ್ಯಪಾನ ಚಟ, ಜನರಲ್ ಹೆಲ್ತ್ ಚೆಕ್ ಅಪ್, ಗರ್ಭಿಣಿ ಮತ್ತು ಮಕ್ಕಳ ತಪಾಸಣೆ, ಮುಟ್ಟಿನ ಸಮಸ್ಯೆ, ಹಾರ್ಮೋನ್ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ , ನೆಬುಲೈಸೇಶನ್, ಗ್ಲುಕೋಸ್ ಡ್ರಿಪ್, ಆಕ್ಸಿಜನ್, ಡೆ-ಕೇರ್ ಸೌಲಭ್ಯವಿದೆ.
ಈ ಸಂದರ್ಭದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಉಚಿತ ಬಿಪಿ, ಶುಗರ್ ತಪಾಸಣೆ ನಡೆಸಲಾಯಿತು.

Exit mobile version