ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದಲ್ಲಿರುವ ಕೂಕ್ರಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ,”ಸರಕಾರಿ ಶಾಲೆ ಉಳಿಸಿ ಬೆಳೆಸಿ” ಸಮಿತಿ ಇದರ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ಜು.4ರಂದು ಭೇಟಿ ನೀಡಿ, ನೂತನ ಕಟ್ಟಡದ ಕೊಠಡಿಗಳ ನಿರ್ಮಾಣದ ಕಾಮಗಾರಿ ವೀಕ್ಷಣೆ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದರು.ನಾಲ್ಕು ವರ್ಷದ ಹಿಂದೆ 16 ಮಕ್ಕಳು ಶಿಕ್ಷಣ ಪಡೆಯುತ್ತಿದ್ದು ಮುಚ್ಚುವ ಸ್ಥಿತಿಗೆ ತಲುಪಿದ ಶಾಲೆಯನ್ನು ದತ್ತು ಪಡೆದ “ಸರಕಾರಿ ಶಾಲೆ ಉಳಿಸಿ ಬೆಳೆಸಿ” ಸಮಿತಿಯ ಸಹಕಾರದಿಂದ ಇದೀಗ ಶಾಲೆಯಲ್ಲಿ 180 ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಂತೆ ಆಗಿದೆ.
ಸರಕಾರಿ ಉಳಿಸಿ ಬೆಳೆಸಿ ಮತ್ತು ಶಾಲಾಭಿವೃದ್ದಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ, ಊರಿನ ಶಿಕ್ಷಣ ಪ್ರೇಮಿಗಳಿಂದ ಶಾಲೆಯ ಸಾಧನೆಯನ್ನು ಕಂಡು ಶಾಲೆಯು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಶಾಲೆಯ ಬೆಳವಣಿಗೆಗೆ ಪೂರಕವಾಗಿ, ಬಂಟ್ವಾಳ ದಡ್ಡಲಕಾಡು ಸರಕಾರಿ ಶಾಲೆಯನ್ನು ದತ್ತು ಪಡೆದ ರಾಜ್ಯ ಮಟ್ಟದಲ್ಲಿ ಗುರುತಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಶಾಲೆಗೆ ನೂತನ ಬಸ್ ನೀಡಲಾಯಿತು.
ಮುಂದಿನ ದಿನಗಳಲ್ಲಿ ಈ ಶಾಲೆಯಲ್ಲಿ 300 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುವ ಗುರಿ ಹೊಂದಿದ್ದು, ರಾಜ್ಯದಲ್ಲಿ ಎರಡನೇ ಮಾದರಿ ಸರಕಾರಿ ಶಾಲೆಯಾಗಿ ಗುರುತಿಸಲ್ಪಡುವ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮತ್ತು ಯೋಜನೆ ರೂಪಿಸಲಾಗಿದ್ದು, ನಿಮ್ಮೆಲ್ಲರ ಸಹಕಾರ ಸಿಕ್ಕಿದರೆ ಶಾಲೆಯನ್ನು ಅದ್ಬುತ ರೀತಿಯಲ್ಲಿ ಮಾಡುವ ಭರವಸೆಯನ್ನು ಪ್ರಕಾಶ್ ಅಂಚನ್ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಸರಕಾರಿ ಶಾಲೆ ಉಳಿಸಿ ಬೆಳೆಸಿ ಇದರ ಕಾರ್ಯದರ್ಶಿ ನಾರಾಯಣ ಪೂಜಾರಿ, ಎಸ್.ಡಿ.ಎಂ.ಸಿ.ಅಧ್ಯಕ್ಷ ಯಶೋಧರ ಬಂಗೇರ, ಉಪಾಧ್ಯಕ್ಷ ಯೋಗೇಂದ್ರ ಆಚಾರ್ಯ, ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಲಕೃಷ್ಣ ಬಂಗೇರ, ಗ್ರಾ.ಪಂ.ಸದಸ್ಯರಾದ ಅಶೋಕ್ ಪೂಜಾರಿ, ಸರಕಾರಿ ಶಾಲೆ ಉಳಿಸಿ ಬೆಳೆಸಿ ಇದರ ರಾಜ್ಯ ಸಮಿತಿಯ ಕಾರ್ಯದರ್ಶಿ ಪುರುಷೋತ್ತಮ ಅಂಚನ್, ಸದಸ್ಯರಾದ ಮಹೇಶ್ ಕುಲಾಲ್ ಡೆಚ್ಚಾರು, ಅರುಣ್ ಗೌಡ, ರಾಮಚಂದ್ರ ಪೂಜಾರಿ, ಮುಖ್ಯೋಪಾಧ್ಯಾಯಿನಿ ಸುಫಲ ಮತ್ತಿತರರು ಉಪಸ್ಥಿತರಿದ್ದರು.