Site icon Suddi Belthangady

ಉಜಿರೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ‘ಗುರುಪೂರ್ಣಿಮ ಮಹೋತ್ಸವ’

ಉಜಿರೆ: ಹಿಂದೂ ರಾಷ್ಟದ ಸ್ಥಾಪನೆಯನ್ನೂ ಯಾರೂ ತಡೆಯಲು ಸಾಧ್ಯವಿಲ್ಲ.`ಹಿಂದೂ ರಾಷ್ಟ ಬಂದೇ ಬರಲಿದೆ’ ಇದು ಕಲ್ಲಿನ ಮೇಲೆ ಕೊರೆದ ವಾಕ್ಯವಾಗಿದೆ. ಅನೇಕ ಸಂತರು ಸಹ ಇದರ ಬಗ್ಗೆ ಹೇಳಿದ್ದು ಕಾಲವೂ ಅದೇ ದಿಕ್ಕಿನಲ್ಲಿ ನಡೆಯುತ್ತಿದೆ.ಆದ್ದರಿಂದ ಈ ಕಾಲದಲ್ಲಿ ನಾವು ಒಂದು ವೇಳೆ ಹಿಂದೂ ರಾಷ್ಟದ ಸ್ಥಾಪನೆಗಾಗಿ ಕಾರ್ಯವನ್ನು ಮಾಡಿದರೆ, ಕಾಲಕ್ಕನುಗುಣವಾಗಿ ಧರ್ಮಕಾರ್ಯವಾಗಿ ಆ ಮಾಧ್ಯಮದಿಂದ ನಮ್ಮ ಸಾಧನೆಯಾಗಲಿದೆ.ಹಿಂದೂರಾಷ್ಟ್ರ ಸ್ಥಾಪನೆಯ ಕಾರ್ಯ ಮಾಡುವ ದೃಢ ನಿಶ್ಚಯ ಮಾಡಿ ಎಂದು ಸನಾತನ ಸಂಸ್ಥೆಯ ಸೌ.ಅಶ್ವಿನಿ ನಾಯಕ್ ಹೇಳಿದರು.ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಅವರು ಮಾತನಾಡಿದರು.ಜು.3 ರಂದುಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಗುರುಪೂರ್ಣಿಮಾ ಮಹೋತ್ಸವವು ಜರುಗಿತು.

ವಿವೇಕಾನಂದ ವಿದ್ಯಾವರ್ಧಕ ಸಂಘ, ಇಂದ್ರಪ್ರಸ್ಥ ವಿದ್ಯಾಲಯದ ಜಯಪ್ರಸಾದ್ ಕಡಮಾಜೆ ತಮ್ಮ ವಿಚಾರಗಳನ್ನು ವ್ಯಕ್ತ ಪಡಿಸುತ್ತಾ ಅಸಾಧ್ಯವಾದಂತಹ ಹಾಗೂ ಅತ್ಯಂತ ಕಠಿಣವಾದಂತಹ ತಪಶ್ಚರ್ಯಗಳನ್ನು ಮಾಡಿ ನಮ್ಮ ಋಷಿಮುನಿಗಳು ಮೊದಲೇ ಎಲ್ಲವನ್ನೂ ಸಾಧಿಸಿದರು. ಆದರೆ ನಾವು ಇನ್ನೂ ಕೂಡ ಪರದಾಡುತ್ತಿದ್ದೇವೆ.ಇದಕ್ಕೆ ಮೂಲ ಕಾರಣ ಏನೆಂದರೆ ಹಿಂದೂಗಳಿಗೆ ಧರ್ಮಶಿಕ್ಷಣದ ಕೊರತೆಯಾಗಿದೆ. ಎಲ್ಲಿಯವರೆಗೆ ಧಾರ್ಮಿಕ ಕೇಂದ್ರಗಳನ್ನು ಧಾರ್ಮಿಕ ಶಿಕ್ಷಣದ ಕೆಂದ್ರಗಳಾಗಿ ಪರಿವರ್ತಿಸುವುದಿಲ್ಲವೋ ಅಲ್ಲಿಯ ವರೆಗೆ ನಮಗೆ ನಮ್ಮ ಧರ್ಮದ ಬಗ್ಗೆ ಹಲವಾರು ಪ್ರಶ್ನೆಗಳು ಮೂಡುತ್ತಲೇ ಇರುತ್ತವೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವು ಒಂದೇಯಾಗಿದೆ – ಹಿಂದೂಗಳಿಗೆ ಧರ್ಮಶಿಕ್ಷಣವನ್ನು ನೀಡುವುದು ಎಂದರು.

ಮಹೋತ್ಸವದ ಪ್ರಾರಂಭದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಪ್ರತಿಮಾ ಪೂಜೆಯನ್ನು ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೇಟ್ನಾಯ , ವಿಶ್ವ ಹಿಂದೂ ಪರಿಷತ್ತಿನ ತಿಮ್ಮಪ್ಪ ಗೌಡ ಬೆಳಾಲು ಉಪಸ್ಥಿತರಿದ್ದರು.

Exit mobile version