Site icon Suddi Belthangady

ವೇಣೂರು: ತಾಲೂಕು ಧ್ವನಿವರ್ಧಕ- ದೀಪಾಲಂಕಾರ ಮಾಲಕರ ಸಂಘದ ಸಭೆ: ಆ.22ರಂದು ಮಹಾಸಭೆ ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಣಯ

ವೇಣೂರು: ಬೆಳ್ತಂಗಡಿ ತಾಲೂಕು ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಸಾಮಾನ್ಯ ಸಭೆಯು ಜು.4ರಂದು ಇಲ್ಲಿಯ ಮಹಾವೀರ ನಗರದ ಬ್ರಹ್ಮಯಕ್ಷ ಕಾಂಪ್ಲೆಕ್ಸ್‌ನಲ್ಲಿ ಜರಗಿತು.
ಸಂಘದ ಅಧ್ಯಕ್ಷ ಚಂದ್ರಶೇಖರ್ ಅವರು ಅಧ್ಯಕ್ಷತೆ ವಹಿಸಿ, ವಲಯ ಸಭೆಗಳಿಗೆ ಆಗಮಿಸಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ ಸಂಘದ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಸದಸ್ಯರ ಸಹಕಾರ ಕೋರಿದರು.

ಸಂಘದ ಸದಸ್ಯತ್ವ ನವೀಕರಣ, ಜಿಲ್ಲಾ ಸಂಘದ ಸದಸ್ಯತ್ವ ಹಾಗೂ ವಲಯ ಸಮಿತಿಗಳಿಂದ ಮಾಸಿಕ ಸಭೆಗಳನ್ನು ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಆ.22ರಂದು ಅಳದಂಗಡಿಯಲ್ಲಿ ಮಹಾಸಭೆ ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.

ತಾಲೂಕು ಸಂಘದ ಕಾರ್ಯದರ್ಶಿ ವಸಂತ ಕೆ. ನಾವೂರು, ಗೌರವಾಧ್ಯಕ್ಷ ಸುನಿಲ್, ಉಪಾಧ್ಯಕ್ಷ ಕೆ.ಡಿ. ಜೋಸೆಫ್, ಜಿಲ್ಲಾ ಸಂಘದ ಸಂಘಟನಾ ಕಾರ್ಯದರ್ಶಿ ಸಂಜೀವ ಬಿ.ಎಚ್., ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಮತ್ತು ಕಾರ್ಯಾಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಸಭೆಯ ಪೂರ್ಣ ಅತಿಥ್ಯವನ್ನು ವೇಣೂರು ಪದ್ಮಾಂಬ ಸೌಂಡ್ಸ್ & ಶಾಮಿಯಾನದ ಮಾಲಕ, ತಾಲೂಕು ಸ೦ಘದ ಗೌರವ ಸಲಹೆಗಾರ ಜಿನರಾಜ್ ಜೈನ್ ವಹಿಸಿದ್ದು, ಎಲ್ಲರನ್ನು ಸತ್ಕರಿಸಿದರು.

ವಲಯ ಅಧ್ಯಕ್ಷರಾದ ಸುನಿಲ್ ಸ್ವಾಗತಿಸಿ, ಮ್ಯಾಥ್ಯೂ ಕುಟ್ಟಿ ವಂದಿಸಿದರು.

Exit mobile version