
ಕುವೆಟ್ಟು: ಕುವೆಟ್ಟು ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಆಶಾಲತಾ ಅವರ ಅಧ್ಯಕ್ಷತೆಯಲ್ಲಿ ಪಣೆಜಾಲು ನಲಿಕೆಯವರ ಸಮುದಾಯ ಭವನದಲ್ಲಿ ಜುಲೈ 4 ರಂದು ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ವಿಧ್ಯಾ ಗ್ರಾಮಸಭೆಯನ್ನು ಮುನ್ನಡೆಸಿದರು.
ಗ್ರಾಮೀಣ ಭಾಗದ ಅಭಿವೃದ್ಧಿಯ ದೃಷ್ಟಿಯಿಂದ ಹಲವಾರು ಚರ್ಚೆಗಳು ನಡೆದವು.
ಗ್ರಾಮ ಸಭೆಗೆ ಜನಸಂಖ್ಯೆ ಕಡಿಮೆ, ಸಂಬಂಧಪಟ್ಟ ಅಧಿಕಾರಿಗಳು ಬಾರದೇ ಇದ್ದ ಕಾರಣ ನೋಡಲ್ ಅಧಿಕಾರಿಯ ಮುಂದೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಸಭೆಯಲ್ಲಿ ಪಂಚಾಯತ್ ಸದಸ್ಯರಾದ ನಿತಿನ್ ಕುಮಾರ್, ವೇದಾವತಿ, ರಚನಾ, ಸಿಲ್ವೆಸ್ಟರ್ ಫೆಲಿಕ್ಸ್ ಮೊರಾನಿಸ್, ಮಂಜುನಾಥ್, ಗಣೇಶ್ ಕೆ.,ಉಷಾ, ಆಮೀನಾ,ಮೈಮುನ್ನೀಸಾ, ವನಿತಾ, ನಿತೇಶ್ ಕೆ.ಶಾಲಿನಿ .ರಿಯಾಝ್,ಶಮೀಮುಲ್ಲಾ, ಮುಸ್ತಫಾ,ಆನಂದಿನಿ ಮತ್ತು ವಿವಿಧ ಇಲಾಖೆಯ ಇಲಾಖಾಧಿಕಾರಿಗಳು, ಅಂಗನವಾಡಿ,ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಗ್ರಾಮಸ್ಥರು, ಪಂ.ಸಿಬ್ಬಂದಿಗಳು ಉಪಸ್ಥಿತರಿದ್ದರು.