Site icon Suddi Belthangady

ಮುಂಡಾಜೆ ಬಂಟರ ಗ್ರಾಮ ಸಮಿತಿ ಸಭೆ: ಕೇಳೇ ಮೌನಿಯೇ ಕಿರು ಚಿತ್ರದ ಪೋಸ್ಟರ್ ಬಿಡುಗಡೆ

ಮುಂಡಾಜೆ: ಜು.1ರಂದು ಮುಂಡಾಜೆ ಬಂಟರ ಗ್ರಾಮ ಸಮಿತಿಯ ಸಭೆಯು ಮುಂಡಾಜೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನೆರವೇರಿತು.

ಈ ಸಂದರ್ಭ ಮುಂಡಾಜೆಯ ಯುವ ಪ್ರತಿಭಾನ್ವಿತ ಕಲಾವಿದ ಶ್ರೀಧರ ಶೆಟ್ಟಿ ಹಾಗೂ ಅನಿತಾ ಶೆಟ್ಟಿ ದಂಪತಿಗಳ ಸುಪುತ್ರ ಸಚಿನ್ ಶೆಟ್ಟಿ ಇವರು ಅಭಿನಯಿಸಿರುವ ಕೇಳೆ ಮೌನಿಯೇ ಕಿರು ಚಿತ್ರದ ಪೋಸ್ಟರ್ ಬಿಡುಗಡೆಯು ಸಚಿನ್ ಶೆಟ್ಟಿ ಅವರ ಧರ್ಮಪತ್ನಿ ಹಾಗೂ ಸಹ ಕಲಾವಿದರೊಂದಿಗೆ ನೆರವೇರಿತು.

ಸಂಘದ ಅಧ್ಯಕ್ಷರಾದ ಪುರುಷೋತ್ತಮಶೆಟ್ಟಿ , ಗೌರವಾಧ್ಯಕ್ಷ ರಾಮಣ್ಣ ಶೆಟ್ಟಿ ಹಾಗೂ ಕಾರ್ಯದರ್ಶಿ, ವಿಜಯಕುಮಾರ್ ರೈ ಇವರು ಶುಭ ಹಾರೈಸಿದರು.ಗ್ರಾಮದ ಎಲ್ಲಾ ಬಂಟ ಬಂಧುಗಳು ಕಾರ್ಯಕ್ರಮಕ್ಕೆ ಸಹಕರಿಸಿದರು.

Exit mobile version