ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭವಾಗಿ 10 ವರ್ಷ ಪೂರೈಸಿದ ಅಂಗವಾಗಿ 10 ನೇ ವರ್ಷದ ಸಂಭ್ರಮಾಚರಣೆ ಜೂ.30 ರಂದು ನಡೆಯಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ 40 ಸಿಬ್ಬಂದಿಗಳನ್ನು ಗೌರವಿಸಿದರು.
ಕಾರ್ಯಕ್ರಮದಲ್ಲಿ ಹೇಮಾವತಿ ವಿ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಆಸ್ಪತ್ರೆಯ ನಿವೃತ್ತ ನಿರ್ದೇಶಕ ಮನ್ಮಥ್ ಕುಮಾರ್, ಮೆಡಿಕಲ್ ಸೂಪರಿಡೆಂಟ್ ದೇವೇಂದ್ರ ಕುಮಾರ್, ನಿರ್ದೇಶಕ ಜನಾರ್ಧನ, ಚೀಫ್ ಮೆಡಿಕಲ್ ಆಫಿಸರ್ ಡಾ. ಸಾತ್ವಿಕ್ ಜೈನ್, ಮೆಡಿಕಲ್ ಟ್ರಸ್ಟ್ ಕಾರ್ಯದರ್ಶಿ ಶಿಶುಪಾಲ ಜೈನ್, ಎಸ್. ಡಿ ಎಂ. ಐಟಿ ವಿಭಾಗದ ಸಿಇಒ ಪೂರನ್ ವರ್ಮ,, ವೈದ್ಯರು, ಸಿಬ್ಬಂದಿಗಳು ಹಾಜರಿದ್ದರು