ವೇಣೂರು: ವೇಣೂರು ಹೋಬಳಿಯ ಪಿಲ್ಯ ಸಮೀಪದ ನಿವಾಸಿ ಲಾರೆನ್ಸ್ ಪಿರೇರಾ ಅವರ ಜಮೀನಿನಲ್ಲಿ ಮಳೆಯಿಂದಾಗಿ ತುಂಡಾಗಿ ನೆಲಕ್ಕೆ ಬಿದ್ದಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ , ಮೂರು ದನಗಳು ಸಾವನ್ನಪ್ಪಿದ ಘಟನೆ ಜೂ.28ರಂದು ವರದಿಯಾಗಿದೆ.
ಬೆಳಿಗ್ಗೆ ಮೇಯಲು ಬಿಟ್ಟಿದ್ದ ದನಗಳಿಗೆ ವಿದ್ಯುತ್ ತಂತಿ ಸ್ಪರ್ಶಿಸಿ 8 ವರ್ಷ,4 ವರ್ಷ ಮತ್ತು 2ವರ್ಷದ ದನಗಳು ಸಾವನ್ನಪ್ಪಿದೆ.
ಘಟನಾ ಸ್ಥಳಕ್ಕೆ ಮೆಸ್ಕಾಂ ಇಲಾಖೆ, ಪಶು ವೈದ್ಯರು, ಕಂದಾಯ ಇಲಾಖೆ, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.