ಗೇರುಕಟ್ಟೆ: ಗೇರುಕಟ್ಟೆ ಪೇಟೆಯಲ್ಲಿ ಜೂ.25 ರಂದು ತಡರಾತ್ರಿ ಬೆಳ್ತಂಗಡಿ ಕಡೆಯಿಂದ ಬರುವ ಆಲ್ಟೋ ಕಾರು ಮತ್ತು ಉಪ್ಪಿನಂಗಡಿ ಕಡೆಯಿಂದ ಬರುವ ಸ್ವಿಫ್ಟ್ ಕಾರುಗಳ ಮಧ್ಯೆ ತೀವೃ ಡಿಕ್ಕಿ ಹೊಡೆದ ಘಟನೆ ನಡೆಯಿತು.
ಸ್ವಿಫ್ಟ್ ಕಾರಿನಲ್ಲಿದ್ದ ಮಹಿಳಾ ಪ್ರಯಾಣಿಕೆ ಸೇರಿದಂತೆ ಇನ್ನೋರ್ವ ಪ್ರಯಾಣಿಕ,ಚಾಲಕ ಯಾವುದೇ ಗಾಯಗಳಿಲ್ಲದೆ ಸಂಭಾವ್ಯ ಅಪಾಯದಿಂದ ಪಾರಾದರು.
ಕಾರುಗಳ ಮುಖಾ-ಮುಖಿ ಡಿಕ್ಕಿ ರಭಸಕ್ಕೆ ಇನ್ನೊಂದು ಆಲ್ಟೋ ಕಾರು ಕೂಡಾ ತೀವೃ ಜಖಂಗೊಂಡು ಕಾರಿನ ಚಕ್ರಗಳೇ ಬೇರ್ಪಟ್ಟಿದ್ದು ವಾಹನಗಳು ಜಖಂ ಗೊಂಡಿದೆ.
ಚಾಲಕ ಮತ್ತೋರ್ವ ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ.
ವಿಷಯ ತಿಳಿದು ತಡ ರಾತ್ರಿ ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್ ಗೇರುಕಟ್ಟೆ ಕೂಡಲೇ ಘಟನಾ ಸ್ಥಳಕ್ಕೆ ದಾವಿಸಿ ಪ್ರಯಾಣಿಕರನ್ನು ಉಪಚರಿಸಿ ಬೆಳ್ತಂಗಡಿ ಸಂಚಾರ ಪೋಲಿಸ್ ಠಾಣೆ 112 ಗೆ ಮಾಹಿತಿ ನೀಡಿದರು. ಕೂಡಲೇ ಪೋಲಿಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.
ಆಲ್ಟೋ ಕಾರಿನ ಚಾಲಕ ಬೆಳ್ತಂಗಡಿ ಸಂಚಾರ ಠಾಣೆಗೆ ಹೋಗಿ ಲಿಖಿತ ದೂರು ನೀಡಿದರು. ಪೋಲಿಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ತಡರಾತ್ರಿಯಲ್ಲಿಯೂ ಗೇರುಕಟ್ಟೆ ಯುವಕರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಹಕರಿಸಿರುವುದು ಸಾರ್ವಜನಿಕ ಪ್ರಶಂಸೆಗೆ ಪಾತ್ರರಾದರು.