Site icon Suddi Belthangady

ಸೇಕ್ರೆಡ್ ಹಾರ್ಟ್ ಆಂ.ಮಾ.ಶಾಲೆಯ ಪೂರ್ವ ಪ್ರಾಥಮಿಕ ನವೀಕರಣಗೊಂಡ ಕಟ್ಟಡದ ಮತ್ತು ಬಾಲವನದ ಆಶೀರ್ವಚನ ಮತ್ತು ಉದ್ಘಾಟನಾ ಸಮಾರಂಭ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಪೂರ್ವ ಪ್ರಾರ್ಥಮಿಕ ವಿಭಾಗದ ನವೀಕರಣಗೊಂಡ ಕಟ್ಟಡದ ಮತ್ತು ಬಾಲವನದ ಆಶೀರ್ವಚನ ಮತ್ತು ಉದ್ಘಾಟನಾ ಸಮಾರಂಭವು ಜೂ.26ರಂದು ಜರುಗಿತು.

ಈ ಸಮಾರಂಭದ ಆರಂಭದಲ್ಲಿ ಮುಖ್ಯ ಅತಿಥಿಗಳನ್ನು ಶಾಲಾ ವಾದ್ಯ ವೃಂದದೊಂದಿಗೆ ಬಹಳ ಅದ್ದೂರಿಯಾಗಿ ಸ್ವಾಗತಿಸಲಾಯಿತು.ಸಮಾರಂಭದ ಅಧ್ಯಕ್ಷರಾದ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷರಾದ ಅತೀ ವಂದನೀಯ ಸ್ವಾಮಿ ಡಾ| ಬಿಷಪ್ ಪೀಟರ್ ಪೌಲ್ ಸಲ್ದಾನ ರವರು ರಿಬ್ಬನ್ ಕತ್ತರಿಸುವುದರ ಮೂಲಕ  ನವೀಕರಣಗೊಂಡ ಕಟ್ಟಡದ ಮತ್ತು ಬಾಲವನದ ಉದ್ಘಾಟನೆಯನ್ನು ಮಾಡಿದರು. ಪ್ರಾರ್ಥನಾ ವಿಧಿಯೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ ಸಮಾರಂಭದ ಅಧ್ಯಕ್ಷರಾದ  ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷರಾದ  ಅತೀ ವಂದನೀಯ ಸ್ವಾಮಿ ಡಾ| ಬಿಷಪ್ ಪೀಟರ್ ಪೌಲ್ ಸಲ್ದಾನರವರು ಆಶೀರ್ವಚನವನ್ನು ಮಾಡಿದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನಾವು ಯಾವುದನ್ನು ಮರೆತರು ನಾವು ಕಲಿತ ವಿದ್ಯೆಯನ್ನು ಮರೆಯುವುದಿಲ್ಲ, ನಾವು ಶಾಲೆಯಲ್ಲಿ ಕಲಿಯುವಾಗ ಎಲ್ಲಾ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದಿದ್ದರೂ ನಮ್ಮ ಶಾಲೆ, ನಮಗೆ ಕಲಿಸಿದ ಶಿಕ್ಷಕ ವೃಂದದವರು ಹಾಗೂ ಪರಿಸರವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿ ಅವರು ಮಕ್ಕಳಿಗೆ ಶುಭ ಹಾರೈಸಿದರು.ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕಥೋಲಿಕ್  ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಅತೀ ವಂದನೀಯ ಸ್ವಾಮಿ ಆ್ಯಂಟನಿ ಮೈಕಲ್ ಸೇರ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ವಂ|ಸ್ವಾ| ಡಾ| ಸ್ಟ್ಯಾನಿ ಗೋವಿಯಸ್, ಸೇಕ್ರೆಡ್ ಹಾರ್ಟ್ ಚರ್ಚ್ ವರ್ಕಾಡಿಯ ಧರ್ಮಗುರುಗಳಾದ ವಂ|ಸ್ವಾ| ಬೇಸಿಲ್ ವಾಸ್, ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ|ಸ್ವಾ| ಜೆರೋಮ್ ಡಿಸೋಜ, ಮಡಂತ್ಯಾರು ಚರ್ಚ್ ನ ಸಹಾಯಕ ಧರ್ಮಗುರುಗಳಾದ ವಂ|ಸ್ವಾ| ವಿಲಿಯಂ ಡಿಸೋಜ, ಪುಂಜಾಲಕಟ್ಟೆ ವಲಯದ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಶ್ರೀಮತಿ  ಚೇತನಾ, ಮಡಂತ್ಯಾರು ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಜೆರಾಲ್ಡ್ ಮೊರಸ್, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ವಲೇರಿಯನ್ ಸೆರಾವೋ ಆಗಮಿಸಿದ್ದರು. ಪೂರ್ವ ಪ್ರಾರ್ಥಮಿಕ ನವೀಕರಣಗೊಂಡ ಕಟ್ಟಡಕ್ಕಾಗಿ ಶ್ರಮಿಸಿದ ಎಲ್ಲರನ್ನೂ ಸಮಾರಂಭದ ಅಧ್ಯಕ್ಷರು ಸನ್ಮಾನಿಸಿದರು.ಈ ಸಮಾರಭದಲ್ಲಿ ಮಡಂತ್ಯಾರು ಶಿಕ್ಷಣ ಸಂಸ್ಥೆಗಳ ಎಲ್ಲಾ ಮುಖ್ಯೋಪಾಧ್ಯಾಯರುಗಳು, ಚರ್ಚ್ ಪಾಲನಾ ಮಂಡಳಿಯ ಸದಸ್ಯರು, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಹಳೆ ವಿದ್ಯಾರ್ಥಿಗಳು, ಹೆತ್ತವರು, ಶಿಕ್ಷಕ- ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಕುಮಾರಿ ಸೌಜನ್ಯ ರವರು ನಿರೂಪಿಸಿ, ಶ್ರೀಮತಿ ಅನಿತಾ ಡಿಸೋಜ ರವರು ಸ್ವಾಗತಿಸಿ, ಶ್ರೀಮತಿ ಶಾಂತಿ ಡಿಸೋಜ ರವರು ಧನ್ಯವಾದಗಳನ್ನು ಸಮರ್ಪಿಸಿದರು. ಈ ಸಮಾರಂಭಕ್ಕೆ ಶಿಕ್ಷಕ-ಶಿಕ್ಷಕೇತರ ವೃಂದದವರು ಸಹಕರಿಸಿದರು.

Exit mobile version