ಪುದುವೆಟ್ಟು: ಪುದುವೆಟ್ಟು ಗ್ರಾಮ ಪಂಚಾಯತ್ ನ 2023-2024 ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಪುದುವೆಟ್ಟು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷ ಯಶವಂತ್ ಕುಮಾರ್ ಡಿ. ರವರ ಅಧ್ಯಕ್ಷತೆಯಲ್ಲಿ ಜೂ.26 ರಂದು ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಕೊಕ್ಕಡ ಕೃಷಿ ಇಲಾಖೆಯ ನಿರ್ದೇಶಕ ಚಿದಾನಂದ ಹೂಗಾರ ಗ್ರಾಮಸಭೆಯನ್ನು ಮುನ್ನಡೆಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷೆ ರೇಣುಕಾ, ಪಂ.ಅಭಿವೃದ್ಧಿ ಅಧಿಕಾರಿ ರಾಜು ಹಾಗೂ ಇಲಾಖೆ ಅಧಿಕಾರಿಗಳಾದ ಸಿದ್ದೇಶ್, ಉಷಾ, ಅನ್ನಪೂರ್ಣ, ಎಂ.ಯತೀಂದ್ರ, ಪೊಲೀಸ್ ಗೋವಿಂದ, ಮೆಸ್ಕಾಂ ಅಧಿಕಾರಿ ಅಶೋಕ್, ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರಾದ ಸಂಜೀವಿ, ಶಾಂತ, ಕವಿತಾ, ನಳಿನಾಕ್ಷಿ, ಡೀಕಮ್ಮ, ಹರಿಣಾಕ್ಷಿ, ಪುದುವೆಟ್ಟು ಸಮುದಾಯ ಆರೋಗ್ಯ ಅಧಿಕಾರಿ ಭಾರತಿ.ಎ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ವಿವಿಧ ಸಮಸ್ಯೆಗಳ ಬಗ್ಗೆ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಗುಮಾಸ್ತ ರವಿಶಂಕರ್ ಸ್ವಾಗತಿಸಿದರು. ಕಾರ್ಯದರ್ಶಿ ಸರೋಜಿನಿ ಕೆ ರವರು ವಾರ್ಡ್ ಸಭೆಗಳಲ್ಲಿ ಬಂದ ಪ್ರಸ್ತಾವನೆ ಹಾಗೂ ಜಮಾ ಖರ್ಚಿನ ಬಗ್ಗೆ ವರದಿ ವಾಚಿಸಿದರು.