Site icon Suddi Belthangady

ನೆಲ್ಯಾಡಿ: ಸಂತ ಅಲ್ಫೋನ್ಸ ಪಿಲ್ಗ್ರಿಮ್ ಚರ್ಚ್ ವತಿಯಿಂದ ಕಿಮೋ ತೇರಾಪಿಗೆ ಸಹಾಯ

ನೆಲ್ಯಾಡಿ: ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರ ನೆಲ್ಯಾಡಿ ಇದರ ವತಿಯಿಂದ ನೆಲ್ಯಾಡಿ ಸಮೀಪ ಕೊಪ್ಪ ಮಾದೇರಿಯಲ್ಲಿ ಕ್ಯಾನ್ಸರ್ ಪೀಡಿತ ಶೈನ್ ಟಿ.ವಿ ಗೆಆರ್ಥಿಕ ಸಹಾಯವನ್ನು ನೀಡಲಾಯಿತು.

ಕ್ಯಾನ್ಸರ್ ಚಿಕಿತ್ಸೆಯಿಂದ ಆರ್ಥಿಕವಾಗಿ ಸಂಪೂರ್ಣ ಹತಾಶರಾಗಿರುವ ಕುಟಂಬ ದೈನಂದಿನ ಖರ್ಚು ಮತ್ತು ಚಿಕಿತ್ಸೆಗಾಗಿ ಊರವರ ಸಹಾಯವನ್ನೇ ಅವಲಂಬಿಸಬೇಕಾಗಿದೆ.ರೋಗಿಯಾಗಿರುವ ಪ್ರಸ್ತುತ ವ್ಯಕ್ತಿಯೇ ಕುಟುಂಬಕ್ಕೆ ಆಧಾರ ಸ್ಥ೦ಭವಾಗಿತ್ತು.ನೆಲ್ಯಾಡಿ ಚರ್ಚಿನ ವಿವಿಧ ಸಂಘಗಳ ನೇತೃತ್ವದಲ್ಲಿ ಪ್ರಸ್ತುತ ವ್ಯಕ್ತಿಯನ್ನು ಜೂ.25ರಂದು ಭೇಟಿ ಮಾಡಿ ಸಹಾಯವನ್ನು ನೀಡಲಾಯಿತು.ಸಿ ಎಂ ಎಲ್ ಪದಾಧಿಕಾರಿಗಳು, ಮಾತೃ ವೇದಿಕೆ ಪದಾಧಿಕಾರಿಗಳು, ಸಂಡೆ ಸ್ಕೂಲ್ ಅದ್ಯಾಪಕರು, ಧರ್ಮಗುರುಗಳು, ಭಗೀನಿಯರು ತಂಡದಲ್ಲಿದ್ದರು.

Exit mobile version