Site icon Suddi Belthangady

ತೋಟತ್ತಾಡಿ ಪರಿಸರದಲ್ಲಿ ಚಿರತೆ ಓಡಾಟ

ಚಾರ್ಮಾಡಿ-ಕನಪಾಡಿ ಅರಣ್ಯ ಪ್ರದೇಶದ ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಮೂರ್ಜೆ, ನೆಲ್ಲಿಗುಡ್ಡೆ ಪರಿಸರದಲ್ಲಿ ಕಳೆದ ಒಂದು ವಾರದಿಂದ ಚಿರತೆ ಓಡಾಟ ಕಂಡು ಬಂದಿದೆ.

ಇಲ್ಲಿನ ಪರಿಸರದ ಕೆಲವೊಂದು ಸಾಕು ನಾಯಿಗಳು ಕಣ್ಮರೆಯಾಗಿದ್ದು ಚಿರತೆಗೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಎರಡು ದಿನಗಳ ಹಿಂದೆ ಸ್ಥಳೀಯರೊಬ್ಬರು ರಾತ್ರಿ ವೇಳೆ ಮನೆಯತ್ತ ತೆರಳುತ್ತಿದ್ದಾಗ ಮನೆಯಿಂದ ಅನತಿ ದೂರದಲ್ಲಿ ಚಿರತೆಯನ್ನು ಕಂಡಿದ್ದಾರೆ. ಕಳೆದ ರಾತ್ರಿ ಮೂರ್ಜೆಯ ಮನೆಯೊಂದರ ಮಂದಿ ಸಂಬಂಧಿಕರ ಮನೆಗೆ ತೆರಳಿ ರಾತ್ರಿ 9ರ ವೇಳೆಗೆ ವಾಪಾಸ್ ಆಗುವಾಗ ಅವರ ಸಾಕು ನಾಯಿ ಕಣ್ಮರೆಯಾಗಿದೆ.2022ರ ಕ್ಯಾಮರಾ ಟ್ರಾಪಿಂಗ್ ವೇಳೆಯು ಈ ಪರಿಸರದಲ್ಲಿ ಎರಡು ಬಾರಿ ಚಿರತೆ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಅರಣ್ಯ ಇಲಾಖೆಯ ಡಿ ಆರ್‌ ಎಫ್ ಒ ಭವಾನಿ ಶಂಕರ್, ಗಸ್ತು ಅರಣ್ಯ ಪಾಲಕ ಪಾಂಡುರಂಗ ಕಮತಿ ಪರಿಸರದಲ್ಲಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಸೆರೆಹಿಡಿಯಲು ಸ್ಥಳೀಯರ ಸಹಕಾರದಲ್ಲಿ ಇಲಾಖೆ ವತಿಯಿಂದ ಬೋನು ಇರಿಸಲಾಗಿದೆ.

Exit mobile version