ವೇಣೂರು: ಶ್ರೀ ದಿಗಂಬರ ಜೈನ ತೀರ್ಥ ಕೇತ್ರ ಸಮಿತಿ (ರಿ) ವೇಣೂರು ವತಿಯಿಂದ 2024 ರ ಫೆಬ್ರವರಿಯಲ್ಲಿ ನಡೆಯಲಿರುವ ವೇಣೂರು ಭಗವನ್ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭೀಷೇಕ ಕುರಿತು ಶ್ರಾವಕರ ಸಮಾಲೋಚನಾ ಸಭೆ ಜೂ.24 ರಂದು ಶ್ರೀ ಬಾಹುಬಲಿ ಸಭಾಭವನದಲ್ಲಿ ನಡೆಯಿತು.
ಡಾ.ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮವನ್ನು ದೀಪ ಬೇಳಗಿಸುವ ಮೂಲಕ ಉದ್ಘಾಟಿಸಿ ಮಹಾಮಸ್ತಕಾಭಿಷೇಕದ ದಿನಾಂಕವನ್ನು ಘೋಷಣೆ ಮಾಡಿದರು.
2024 ರ ಫೆಬ್ರವರಿ 22 ರಿಂದ ಮಾರ್ಚ್ 1 ರ ತನಕ ವೇಣೂರು ಬಾಹುಬಲಿಗೆ ಮಹಾಮಜ್ಜನ ನಡೆಯಲಿದೆ.ಸಮಿತಿಯಲ್ಲಿ ಯುವಕರು ಹೆಚ್ಚಾಗಿ ಬರುಬೇಕು.27 ಸಮಿತಿಗಳನ್ನು ರಚಿಸಲಾಗಿದೆ.ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಮೂಡಿಬರಲಿದೆ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ತನು-ಮನ-ಧನ ಸಹಕರಿಸಬೇಕು ಎಂದು ಧರ್ಮಸ್ಥಳ ಧರ್ಮಧಿಕಾರಿಗಳಾದ, ಸಮಿತಿ ಅಧ್ಯಕ್ಷರಾದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.
ಅಳದಂಗಡಿಯ ಪದ್ಮಪ್ರಸಾದ್ ಅಜಿಲರು ಪ್ರಾಸ್ತಾವಿಕ ನುಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಅಭಯ ಚಂದ್ರ ಜೈನ್ , ಎಂ.ಕೆ.ವಿಜಯ ಕುಮಾರ್, ಸಮಿತಿಯ ಮುಖ್ಯಸ್ಥರಾದ ಪ್ರವೀಣ್ ಕುಮಾರ್ ಇಂದ್ರ, ಇನ್ನಿತರ ಗಣ್ಯರು , ಶ್ರಾವಕ, ಶ್ರಾವಕಿಯರು ಉಪಸ್ಥಿತರಿದ್ದರು.