Site icon Suddi Belthangady

ನಡ ಸರಕಾರಿ ಪ್ರೌಢಶಾಲೆಯಲ್ಲಿ ಪೋಷಕರ ಸಭೆ

ನಡ: ಸರಕಾರಿ ಪ್ರೌಢಶಾಲೆ ನಡ ಇದರ 2023-24ನೇ ಸಾಲಿನ ಪ್ರಥಮ ಪೋಷಕರ ಸಭೆ ಜೂ.24 ರಂದು ನಡೆಯಿತು.

ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಸುಧಾಕರ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ವಿದ್ಯಾರ್ಥಿಗಳ ಕಲಿಕಾ ಪ್ರಗತಿಯ ಬಗ್ಗೆ ಹಾಗೂ ವಿಶೇಷವಾಗಿ ಶಾಲೆಯ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಯಿತು.ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ ಜಯಂತಿ ಸ್ಟ್ರೆಲ್ಲಾ ಸ್ವಾಗತಿಸಿದರು.ನಿಕಟ ಪೂರ್ವ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಧರಣೇಂದ್ರ ಜೈನ್ ಮಾತಾಡಿ ಪೋಷಕರು ಈ ಸಾಲಿನಲ್ಲಿ ಶಾಲೆಗೆ ಅಡಿಕೆ ತೋಟವನ್ನು ನಿರ್ಮಿಸುವ ಬೇಡಿಕೆಯನ್ನಿತ್ತರು.ಪ್ರಾಸ್ತಾವಿಕವಾಗಿ ಮಾತಾಡಿದ ಶಿಕ್ಷಕ ಶಿವಪುತ್ರ ಸುಣಗಾರ್ ಶಾಲೆಯು ನಡೆದು ಬಂದ ಹಾದಿಯ ಬಗ್ಗೆ ಬೆಳಕು ಚೆಲ್ಲಿದರು.

ಮುಖ್ಯ ಶಿಕ್ಷಕ ಯಾಕೂಬ್ ಎಸ್.ಕೊಯ್ಯೂರು ಇವರು ಮಕ್ಕಳ ಪ್ರಗತಿಯ ಬಗ್ಗೆ ಹಾಗೂ ಶಾಲಾಭಿವೃದ್ದಿ ಯೋಜನೆಯ ಬಗ್ಗೆ ಪೋಷಕರಿಗೆ ವಿವರಿಸಿದರು.ಚರ್ಚಾ ಸಮಯದಲ್ಲಿ ಭಾಗವಹಿಸಿದ ಪೋಷಕರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

ವೇದಿಕೆಯಲ್ಲಿ ಎಸ್.ಡಿ.ಎಂ.ಸಿ.ಸದಸ್ಯರುಗಳಾದ ಲಕ್ಷ್ಮಣ ನಾಯ್ಕ, ಆನಂದ ಶೆಟ್ಟಿ, ಚೇತನಾ, ಪ್ರೇಮ ಹೊಕ್ಕಿಲ, ಪ್ರೇಮ ಕೆಳಗಿನ ಸುರ್ಯ ಇವರುಗಳು ಉಪಸ್ಥಿತರಿದ್ದರು.ಕೊನೆಯಲ್ಲಿ ಹಿಂದಿ ಶಿಕ್ಷಕ ಮೋಹನ ಬಾಬು ಧನ್ಯವಾದವಿತ್ತರು.ವಿಜ್ಞಾನ ಶಿಕ್ಷಕಿ ಶ್ರೀಮತಿ ಶೋಭಾ.ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version