Site icon Suddi Belthangady

ಇಂದಬೆಟ್ಟು 2023-24 ಪ್ರಥಮ ಸುತ್ತಿನ ಗ್ರಾಮ ಸಭೆ

ಇಂದಬೆಟ್ಟು: ಇಂದಬೆಟ್ಟು ಗ್ರಾಮ‌ ಪಂಚಾಯತ್ ನ 2023-24 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಜೂ.23 ರಂದು ಅಧ್ಯಕ್ಷ ಆನಂದ್ ಇವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು.ಮಾರ್ಗದರ್ಶಿ ಅಧಿಕಾರಿಯಾಗಿ ಅಕ್ಷರ ದಾಸೋಹ ಇಲಾಖೆಯ ತಾರಕೇಶ್ವರಿ ಆಗಮಿಸಿದ್ದರು.ಕಾರ್ಯಕ್ರಮವನ್ನು ಹಿರಿಯ ಪ್ರಾಥಮಿಕ ಶಾಲೆ ದೇವನಾರಿ ಇಲ್ಲಿಯ ವಿದ್ಯಾರ್ಥಿನಿಗಳಾದ ಸಿಂಚನ ಮಿಂದುಶ್ರೀ , ರೀಮಾ ಅಣುದ್ಯ ನಾಡಗೀತೆ ಹಾಡಿದರು.

ಜಮಾ ಖರ್ಚಿನ ವರದಿಯನ್ನು ಪಂಚಾಯಿತಿ ಸಿಬ್ಬಂದಿ ಸವಿತಾ ಇವರು ಮಂಡಿಸಿದರು.

ವೇದಿಕೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಧೀರಜ್ ಕುಮಾರ್, ಅಂಕಿತ ಜೈನ್ (VAO), TIEC ಮ್ಯಾನೇಜರ್ ವಿನಿಷಾ, C.D.P.O ಇಲಾಖೆಯ ಮೇಲ್ವಿಚಾರಕರು ನಾಗವೇಣಿ, ರೇಷ್ಮ ರಾಜ್ TAE ತಾ ಪಂ ಬೆಳ್ತಂಗಡಿ, ತೋಟಗಾರಿಕೆ ಇಲಾಖೆ ಬೆಳ್ತಂಗಡಿ ಮಹಾವೀರ್, ಕೃಷಿ ಅಧಿಕಾರಿ ಬೆಳ್ತಂಗಡಿ ಹೈಮೇರ ಜಬೀನ್ , ಗಸ್ತು ಅರಣ್ಯಾಧಿಕಾರಿ ಬೆಳ್ತಂಗಡಿ ರಾಘವೇಂದ್ರ ಪ್ರಸಾದ್, ಕೆನರಾ ಬ್ಯಾಂಕ್ RO ಪುತ್ತೂರು ನಾರಾಯಣ ರೈ, ಉಪ ಅರಣ್ಯ ಅಧಿಕಾರಿ ಮಿತ್ತಬಾಗಿಲು ರಂಜಿತ್ ಕುಮಾರ್, ಮೆಸ್ಕಾಂ ಅಧಿಕಾರಿ ಬೆಳ್ತಂಗಡಿ ಕಾರ್ತಿ ಮೆದು ಬಾಬು, ಹರ್ಷಿತ್, ಸಂಜತ್ RB ಬೆಳ್ತಂಗಡಿ, ಆಶಾಲತಾ ಉಪಾಧ್ಯಕ್ಷರು, ಗ್ರಾಮ ಪಂಚಾಯತಿ ಸದಸ್ಯರುಗಳಾದ ಸುಮಿತ್ರ, ಜಯಂತಿ, ಪ್ರಮೋದ್, ಸತೀಶ್, ಸೌಮ್ಯ,ವೀರಪ್ಪ ಮೊಯಿಲಿ, ಶ್ರೀಕಾಂತ್, ಪ್ರೇಮಾ, ಹರಿಣಾಕ್ಷಿ, ಉಪಸ್ಥಿತರಿದ್ದರು.

Exit mobile version