ಬೆಳ್ತಂಗಡಿ: ಸಂತ ತೆರೇಸಾ ಕನ್ನಡ ಮಾಧ್ಯಮ ಪ್ರೌಢಶಾಲೆಯ ನೂತನ ಸಂಸತ್ತಿನ ಉದ್ಘಾಟನಾ ಸಮಾರಂಭವು ಜೂ.22ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಉತ್ತಮ ನಾಯಕನ ಗುಣ ಮತ್ತು ಜವಾಬ್ದಾರಿಯ ಕೌಶಲ್ಯತೆ ಬೆಳೆಸಲು ಪ್ರಾರ್ಥನಾ ವಿಧಿಯಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಸತ್ತಿನ ಅಧ್ಯಕ್ಷರಾದ ಶಾಲಾ ಮುಖ್ಯೋಪಾದ್ಯಯಿನಿ ವಂ.ಭಗಿನಿ ಲೀನಾ ಡಿಸೋಜಾರವರು ಮೊದಲು ದೀಪ ಬೆಳಗಿಸಿದರು. ಮಂತ್ರಿಮಂಡಲದ ಉಳಿದ ಸದಸ್ಯರು ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನೆರವೇರಿಸುವೆವು ಎಂದು ದೀಪವನ್ನು ಬೆಳಗಿಸಿದರು.
ಮುಖ್ಯಶಿಕ್ಷಕರು ಪ್ರಮಾಣ ವಚನ ಆರಂಬಿಸಲು ಚಾಲನೆ ನೀಡಿದರು. ಉಳಿದ ಸದಸ್ಯರು ತಮ್ಮ ಹೆಸರು ಮತ್ತು ಜವಾಬ್ದಾರಿಯ ಹುದ್ದೆಯನ್ನು ಉಲೇಖಿಸಿ ಪ್ರತಿಜ್ಞೆ ಸ್ವೀಕರಿಸಿದರು. ಶಾಲಾ ನಾಯಕಿ ಕು. ಯಶಸ್ವಿ , ಸಭಾಪತಿ ಕು.ಆಫ್ರ , ಉಪನಾಯಕ ಬಿ.ಆರ್. ದಿಗಂತ್ , ವಿರೋದ ಪಕ್ಷದ ನಾಯಕಿ ಕು. ಧನ್ಯಶ್ರೀ ಮತ್ತು ಇತರ ಮಂತ್ರಿಮಂಡಲದ ಸದಸ್ಯರು ಉರಿಯುವ ದೀಪದ ಜ್ವಾಲೆಯ ಮುಂದೆ ಪ್ರಮಾಣ ಮಾಡಿ ಜವಾಬ್ದಾರಿ ಸ್ವೀಕರಿಸಿದರು. ಶಾಲಾ ಮಂತ್ರಿಮಂಡಲದ ಮೇಲ್ವೀಚಾರಕರಾಗಿ ವಂ. ಭಗಿನಿ ಶೆಲಿನ್ ರೋಡ್ರಿಗಸ್‌ರವರು ಮಂತ್ರಿಮಂಡಲಕ್ಕೆ ಮಾರ್ಗದರ್ಶನ ನೀಡಿದರು. ಕು. ರಿಶಲ್ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.