Site icon Suddi Belthangady

ಕಿರಣ್ ಮಹಿಳಾ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ: ಡಿ.ಕೆ.ಆರ್‌.ಡಿ.ಎಸ್ ಸಮಾಜ ಸೇವಾ ಸಂಸ್ಥೆ ಬೆಳ್ತಂಗಡಿಯ ಅಂಗ ಸಂಸ್ಥೆಯಾಗಿ 2017 ರಲ್ಲಿ ಪ್ರಾರಂಭಗೊಂಡು ಮುನ್ನಡೆಯುತ್ತಿರುವ ಕಿರಣ್ ಮಹಿಳಾ ತಾಲೂಕು ಒಕ್ಕೂಟ (ರಿ)ಬೆಳ್ತಂಗಡಿ ಇದರ 2023 -2026ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಪದಗ್ರಹಣ ಕಾರ್ಯಕ್ರಮ ಸೆಂಟ್ ಮೇರಿಸ್ ಚರ್ಚ್ ಕುಟ್ರುಪ್ಪಾಡಿ ಸಭಾಂಗಣದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಡೈಸಿ ಜಾಯ್, ಉಪಾಧ್ಯಕ್ಷರಾಗಿ ಗ್ರೇಸಿ ತೋಮಸ್, ಕಾರ್ಯದರ್ಶಿಯಾಗಿ ವಲ್ಸಮ್ಮ ಎಜೆ, ಜೊತೆ ಕಾರ್ಯದರ್ಶಿಯಾಗಿ ನಿಶಾ, ಕೋಶಾಧಿಕಾರಿಯಾಗಿ ಸೂಸಮ್ಮ ಇವರು ಆಯ್ಕೆಯಾದರು.
ಉಳಿದಂತೆ ಸಮಿತಿ ಸದಸ್ಯರಾಗಿ ಡಯಾನ, ಬೀನಾ, ಭವ್ಯ,ರೆಬೇಕಾ ಆಯ್ಕೆಯಾಗಿದ್ದಾರೆ.

Exit mobile version