Site icon Suddi Belthangady

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ.ಶೌರ್ಯ ವಿಪತ್ತು ನಿರ್ವಹಣಾ ಘಟಕ ಸ್ವಯಂಸೇವಕರ ತಂಡ ಸ್ಥಾಪನೆಯ ದಿನದ ಅಂಗವಾಗಿ ಹಾಸನದ ಜೀವನ ಜ್ಯೋತಿ ಶಾಲೆಯಲ್ಲಿ ಸಿಹಿತಿಂಡಿ ಮತ್ತು ಪೆನ್ಸಿಲ್, ಪೆನ್ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸ್ವಯಂಸೇವಕರ ತಂಡ ಸ್ಥಾಪನೆಗೊಂಡು ಇಂದಿಗೆ ಮೂರು ವರ್ಷ ಪೂರೈಸಿ ರಾಜ್ಯದ್ಯಂತ ಸಾಮಾಜಿಕ ಸೇವೆಯಲ್ಲಿ ಮುನ್ನುಗ್ಗುತ್ತಿದೆ, ಆದ್ದರಿಂದ ಇಂದು ಹಾಸನ ಗೌರಿ ಕೊಪ್ಪಲಿನ ಜೀವನ ಜ್ಯೋತಿ ಕಿವುಡು ಹಾಗೂ ಮಾತು ಬಾರದ ಶಾಲೆಯಲ್ಲಿ ಮಕ್ಕಳಿಗೆ ಸಿಹಿ ಹಂಚಿ ಹಾಗೂ ಪೆನ್ಸಿಲ್ ಪೆನ್ನು ಕೊಡುವ ಮುಖಾಂತರ ಈ ವರ್ಷ ಆಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ದೀಪವನ್ನು ಬೆಳಗಿಸಿ ಮಾತನಾಡಿದಂತಹ ಹಾಸನ ಜಿಲ್ಲಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕರು ಮಮತಾ ರವರು ವಿಪತ್ತು ತಂಡವು ಪೂಜ್ಯ ಡಾ.ಡಿ.ವೀರೇಂದ್ರ ಹೆಗಡೆಯವರು ಹಾಗೂ ಮಾತೃಶ್ರೀ ಅಮ್ಮನವರ ಆಶಯದಂತೆ ರಾಜ್ಯದ ಕೆಲವು ಜಿಲ್ಲೆಗಳು ತಾಲೂಕುಗಳಲ್ಲಿ ಸ್ವಯಂ ಪ್ರೇರಿತ ಸೇವೆ ಮಾಡುವಂತಹ ಯುವಕರನ್ನು ರಚನೆ ಮಾಡಿ ಅದು ಹಾಸನದಲ್ಲಿ ಸಮಾಜಕ್ಕೆ ಒಳ್ಳೆ ಸೇವೆ ಕೊಡುವಂತ ತಂಡ ವಿಪತ್ತು ಬಂದಾಗ ಆಪ್ತರಕ್ಷಕರಂತೆ ಈ ಶೌರ್ಯ ತಂಡವು ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಪಾಲ್ಗೊಂಡಂತಹ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲೆಯ ನಿರ್ದೇಶಕರು ಮಮತಾ, ರಾಣಿ ಆದರ್ಶ ನಗರ ಶೌರ್ಯ ವಿಪತ್ತು ಘಟಕದ ಸೋಮು ಸದಸ್ಯರು, ಶರತ್, ರಾಘವೇಂದ್ರ, ಅಕ್ಷಯ್, ನಾಗರತ್ನ, ಸ್ವಪ್ನ, ಮಂಜುಳಾ, ಜಲಜ ಭಾಗವಹಿಸಿದ್ದರು

Exit mobile version